Saturday, June 6, 2026
spot_imgspot_img
spot_imgspot_img

ವಿವಾದಾಸ್ಪದ ಕಾರ್ಟೂನನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸಿದ ಶಿಕ್ಷಕನ ಬರ್ಬರ ಹತ್ಯೆ

- Advertisement -
- Advertisement -

ಪ್ಯಾರಿಸ್: ವಿವಾದಾಸ್ಪದ ಕಾರ್ಟೂನ್ ಒಂದನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸಿದ ಶಿಕ್ಷಕನನ್ನು ಬರ್ಬರವಾಗಿ ಹತ್ಯೆಮಾಡಲಾಗಿದೆ. ಉತ್ತರ ಪ್ಯಾರಿಸ್ ನಲ್ಲಿ ಈ ಕೃತ್ಯ ನಡೆದಿದೆ. ಚರಿತ್ರೆ ಪಾಠದ ವೇಳೆ ಶಿಕ್ಷಕ ಸ್ಯಾಮುವೆಲ್ ಎಂಬವರು ವಿವಾದಾಸ್ಪದ ಕಾರ್ಟೂನ್ ಒಂದನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದರು ಎಂದು ಆರೋಪಿಸಲಾಗಿದೆ.

ಇದರಿಂದ ಆಕ್ರೋಶಗೊಂಡ ಅಪ್ರಾಪ್ತನೊಬ್ಬ ಅವರ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಇದು ಭಯೋತ್ಪಾದನಾ ಕೃತ್ಯ ಎಂದು ಫ್ರಾನ್ಸ್ ಸರ್ಕಾರ ಹೇಳಿದೆ. ಅರೋಪಿಯ ಹೆಸರು ಹಾಗೂ ಇನ್ನಿತರ ಮಾಹಿತಿ ಬಹಿರಂಗಪಡಿಸಿಲ್ಲ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವ ಮನದಟ್ಟು ಮಾಡಿಕೊಡಲು ಶಿಕ್ಷಕ ಸ್ಯಾಮುವೆಲ್ ಈ ಕಾರ್ಟೂನ್ ನನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದರು ಎಂದು ಹೇಳಲಾಗುತ್ತಿದೆ.

- Advertisement -

Related news

error: Content is protected !!