

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಪದಗ್ರಹಣ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ದಿನಾಂಕ 2-1 2022 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 8 ರಿಂದ ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಜರಗಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಬಂಟ್ವಾಳ ಕ್ಷೇತ್ರದ ಶಾಸಕ ಶ್ರೀಯುತ ರಾಜೇಶ್ ನಾಯಕ್ ನೆರವೇರಿಸಲಿದ್ದು, ಕಾರ್ಯಕ್ರಮವು ಕಲ್ಲಡ್ಕ ವಲಯ ಅಧ್ಯಕ್ಷ ಈಶ್ವರ ನಾಯ್ಕ ಮುರಬೈಲು ಇವರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ದಂಡಾಧಿಕಾರಿ ಶ್ರೀಮತಿ ರಶ್ಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಸಂತ ಸಾಲಿಯಾನ್, ಮಾಜಿ ಶಾಸಕರಾದ ಶ್ರೀ ಎ ರುಕ್ಮಯ್ಯ ಪೂಜಾರಿ, ಕಲ್ಲಡ್ಕ ರೈತರ ಸೇವಾ ಬ್ಯಾಂಕಿನ ಅಧ್ಯಕ್ಷರು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ.
ಮಾಜಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಪದ್ಮನಾಭ ರೈ , ಗೋಳ್ತಮಜಲುಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಅಭಿಷೇಕ್ ಶೆಟ್ಟಿ, ಕಲ್ಲಡ್ಕ ಜನಜಾಗೃತಿ ವಲಯ ಸಮಿತಿಯ ಅಧ್ಯಕ್ಷ ಶ್ರೀ ಬಟ್ಟಪ್ಪ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.




ಪ್ರಸ್ತುತ ಕಲ್ಲಡ್ಕ ವಲಯವು ಕಲ್ಲಡ್ಕ, ವೀರಕಂಬ, ಬಾಳ್ತಿಲ, ಗೋಳ್ತಮಜಲು ಎ, ಗೋಳ್ತಮಜಲು ಬಿ, ಗೋಳ್ತಮಜಲು ಸಿ, ಕೆಲಿಂಜ ,ಬೋಳಂತೂರು ,ಮಾಮೇಶ್ವರ, ಮೊದಲಾದ 9 ಒಕ್ಕೂಟಗಳನ್ನು ಒಳಗೊಂಡ ವಲಯವಾಗಿದ್ದು ಸುಮಾರು 321 ಪ್ರಗತಿಬಂಧು ಸ್ವಸಹಾಯ ಗುಂಪುಗಳನ್ನು ಒಳಗೊಂಡಿದ್ದು ಒಟ್ಟಾರೆ 2,804 ಸದಸ್ಯರು ಇದ್ದಾರೆ.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಕಶೆಕೋಡಿ ಸೂರ್ಯನಾರಾಯಣ ಭಟ್ ರವರ ಪುರೋಹಿತರಲ್ಲಿ ನಡೆಯಲಿದ್ದು ಸರ್ವರು ಕ್ಲಪ್ತ ಸಮಯದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

