Saturday, July 5, 2025
spot_imgspot_img
spot_imgspot_img

ಕಲ್ಲಡ್ಕ: (25) ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿ. ‘ಸಮೃದ್ಧಿ’ ನೂತನ ಕಟ್ಟಡ ಉದ್ಘಾಟನೆ ಹಾಗೂ ಕಲ್ಲಡ್ಕ ಶಾಖೆ ಸ್ಥಳಾಂತರ ಕಾರ್ಯಕ್ರಮ

- Advertisement -
- Advertisement -

ಕಲ್ಲಡ್ಕ: ನೂತನ ಕಟ್ಟಡ ’ಸಮೃದ್ಧಿ’ಯ ಉದ್ಘಾಟನೆ ಹಾಗೂ ಸ್ವಂತ ಕಟ್ಟಡಕ್ಕೆ ’ಕಲ್ಲಡ್ಕ ಶಾಖೆ’ಯ ಸ್ಥಳಾಂತರ ಕಾರ್ಯಕ್ರಮವು ನ. 25 ನೇ ಸೋಮವಾರ ಮಧ್ಯಾಹ್ನ 12:00ಕ್ಕೆ ’ಸಮೃದ್ಧಿ ಕಲ್ಲಡ್ಕ’ ಇಲ್ಲಿ ನಡೆಯಲಿದೆ.

ಮಧ್ಯಾಹ್ನ ನಡೆಯುವ ಸಭಾಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಹೆಚ್‌‌. ಜಗನ್ನಾಥ ಸಾಲಿಯಾನ್‌ ವಹಿಸಲಿದ್ದಾರೆ.

ನೂತನ ಕಟ್ಟಡದ ಉದ್ಘಾಟನೆಯನ್ನು ಡಾ. ಪ್ರಭಾಕರ ಭಟ್‌‌ ಕಲ್ಲಡ್ಕ ಅಧ್ಯಕ್ಷರು ವಿವೇಕಾನಂದ ವಿಧ್ಯಾವರ್ಧಕ ಸಂಘ ಪುತ್ತೂರು ನೆರವೇರಿಸಲಿದ್ದಾರೆ. ಶಾಖಾ ಕಛೇರಿ ಉದ್ಘಾಟನೆಯನ್ನು ಕ್ಯಾಪ್ಟನ್‌‌ ಬ್ರಿಜೇಶ್‌‌ ಚೌಟ ಸಂಸದ ದ.ಕ. ಜಿಲ್ಲೆ, ಭದ್ರತಾ ಕೊಠಡಿ ಉದ್ಘಾಟನೆಯನ್ನು ರಾಜೇಶ್ ನಾಯ್ಕ್‌‌‌‌‌ ಯು ಶಾಸಕ ಬಂಟ್ವಾಳ ವಿಧಾನ ಸಭಾ ಕ್ಷೇತ್ರ, ಕಟ್ಟಡದ ಹೆಸರು ಅನಾವರಣನ್ನು ಕಿಶೋರ್‌ ಕುಮಾರ್‌‌ ಪುತ್ತೂರು ವಿಧಾನ ಪರಿಷತ್‌‌ ಸದಸ್ಯ, ಶಾಖೆಯ ಗಣಕೀರಣ ಉದ್ಘಾಟನೆಯನ್ನು ಬಿ. ರಮಾನಾಥ ರೈ ಮಾಜಿ ಸಚಿವರು ಕರ್ನಾಟಕ ಸರಕಾರ ಇವರು ನೆರವೇರಿಸಲಿದ್ದಾರೆ.

ರಮೇಶ್‌‌ ಹೆಚ್‌‌ ಎನ್‌‌ ಸಹಕಾರ ಸಂಘಗಳ ಉಪನಿಂಬಂಧಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಕೆ. ಪದ್ಮನಾಭ ಕೊಟ್ಟಾರಿ ಮಾಜಿ ಶಾಸಕರು ಹಾಗೂ ಅಧ್ಯಕ್ಷರು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ(ನಿ.) ಕಲ್ಲಡ್ಕ, ರುಕ್ಮಯ್ಯ ಪೂಜಾರಿ ಮಾಜಿ ಶಾಸಕರು, ಎಸ್‌, ಆರ್‌‌‌ ಸತೀಶ್ಚಂದ್ರ ನಿರ್ದೇಶಕರು ಕ್ಯಾಂಪ್ಕೋ ಲಿ. ಮಂಗಳೂರು, ಬಿ.ಕೆ ಅಣ್ಣು ಪೂಜಾರಿ ಅಧ್ಯಕ್ಷರು ಬಾಳ್ತಿಲ ಗ್ರಾಮ ಪಂಚಾಯತ್‌‌‌‌‌‌‌, ಶ್ರೀಮತಿ ಪ್ರೇಮಾ ಪುರುಷೋತ್ತಮ ಅಧ್ಯಕ್ಷರು ಗೋಳ್ತಮಜಲು ಗ್ರಾಮ ಪಂಚಾಯತ್‌‌ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!