Thursday, March 28, 2024
spot_imgspot_img
spot_imgspot_img

ಮಂಗಳೂರು- ಬೆಂಗಳೂರು ವಿಶೇಷ ರೈಲು ಆರಂಭ.

- Advertisement -G L Acharya panikkar
- Advertisement -

ಮಂಗಳೂರು: ಕಾರವಾರ- ಯಶವಂತಪುರ- ಕಾರವಾರ ಸೇರಿದಂತೆ ಕರಾವಳಿ ಭಾಗಕ್ಕೆ ಮೂರು ವಿಶೇಷ ರೈಲುಗಳನ್ನು ಆರಂಭಿಸಲು ನೈಋತ್ಯ ರೈಲ್ವೇಗೆ ರೈಲ್ವೇ ಇಲಾಖೆ ಅನುಮತಿ ನೀಡಿದೆ.

ರೈಲು ನಂ. 06585 ಯಶವಂತಪುರ- ಕಾರವಾರ ರೈಲು ಸೆಪ್ಟೆಂಬರ್- 4ರ ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡಲಿದೆ. ,ರೈಲು ನಂ. 6586 ಸೆಪ್ಟೆಂಬರ್- 5ರಂದು ಕಾರವಾರದಿಂದ ಸಂಜೆ 6 ಗಂಟೆಗೆ ಹೊರಡಲಿದೆ. ಈ ಹಿಂದೆ ಸಂಚರಿಸುತ್ತಿದ್ದ ರೈಲು ಸಂ. 6595/ 6596ರ ವೇಳಾಪಟ್ಟಿಗಳು ಇದಕ್ಕೆ ಅನ್ವಯವಾಗಲಿವೆ.

06515 ಬೆಂಗಳೂರು ಸಿಟಿ- ಮಂಗಳೂರು (ವಾರದಲ್ಲಿ 4ದಿನ) ಸೆಪ್ಟೆಂಬರ್-4ರಿಂದ ಹಾಗೂ 06516 ಮಂಗಳೂರು- ಬೆಂಗಳೂರು ಸೆಪ್ಟೆಂಬರ್ 6ರಿಂದ ಸಂಚರಿಸಲಿದೆ.
06517 ಬೆಂಗಳೂರು- ಮಂಗಳೂರು (ವಾರದಲ್ಲಿ 3ದಿನ) ಸೆಪ್ಟೆಂಬರ್-6ರಿಂದ, 06518 ಮಂಗಳೂರು- ಬೆಂಗಳೂರು ಸೆಪ್ಟೆಂಬರ್-5ರಿಂದ ಸಂಚರಿಸಲಿದೆ.

ವಿಶೇಷ ರೈಲುಗಳಲ್ಲಿ 15 ಬೋಗಿಗಳು ಇರಲಿವೆ. ಈ ಪರೀಕ್ಷಾ ವಿಶೇಷ ರೈಲುಗಳು ಮುಂದಿನ ಸೂಚನೆಯ ವರೆಗೆ ಚಾಲನೆಯಲ್ಲಿರುತ್ತದೆ. ಇದರಲ್ಲಿ ಪ್ರಯಾಣಿಸಲು ಮುಂಗಡ ಬುಕ್ಕಿಂಗ್‌ ಮಾಡುವುದು ಅಗತ್ಯವಾಗಿದೆ.

- Advertisement -

Related news

error: Content is protected !!