Saturday, August 15, 2026
spot_imgspot_img
spot_imgspot_img

ಕಲ್ಲಡ್ಕ: ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ವತಿಯಿಂದ 80ನೇ ಸ್ವಾತ್ರಂತ್ರ್ಯ ದಿನಾಚರಣೆ

- Advertisement -
- Advertisement -

ಕಲ್ಲಡ್ಕ: ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ  ಕಲ್ಲಡ್ಕ ಇದರ ವತಿಯಿಂದ 80ನೇ ವರ್ಷದ ಸ್ವಾತ್ರಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಹಾಗೂ ಸುರಕ್ಷಾ ಸಂಗಮದ ಗೌರವ ಸಲಹೆಗಾರರಾದ ಶ್ರೀ ರುಕ್ಮಯ ಪೂಜಾರಿ ಅವರು ಉಪಸ್ಥಿತರಿದ್ದರು. ಅವರು ಸ್ವಾತಂತ್ರ್ಯ ಹಾಗೂ ದೇಶದ ಬಗ್ಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ ಪ್ರೇರೇಪಿಸಿದರು ಹಾಗೂ ಸ್ವಾತ್ರಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ದಯಾನಂದ ಏಳ್ತಿಮಾರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಗೌರವಾನ್ವಿತ ಅತಿಥಿಗಳಾಗಿ ಕೆ.ಎನ್.ಬಿ. ಮಾಲಕರಾದ ನವಾಜ್, ಸುರಕ್ಷಾ ಸಂಗಮದ ಗೌರವ ಅಧ್ಯಕ್ಷರಾದ ವೆಂಕಟ್ರಾಯ ಪ್ರಭು, ಅಧ್ಯಕ್ಷರಾದ ಜಯಪ್ರಶಾಂತ್ ಕುದ್ರೆಮಾರು,  ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಉಮಾವತಿ ಪೂರ್ಲಿಪ್ಪಾಡಿ ಹಾಗೂ ಸುರಕ್ಷಾ ಸಂಗಮದ ಸದಸ್ಯರಾದ ವಿಕೇಶ್ ಕುಮಾರ್ ತೋಟ ಉಪಸ್ಥಿತರಿದ್ದರು.

ಕಾರ್ಯಕ್ರಮದ ಗಣ್ಯರನ್ನು ಯತೀನ್ ಕುಮಾರ್ ಏಳ್ತಿಮಾರು ಅವರು ಸ್ವಾಗತಿಸಿ,  ನಿರೂಪಣೆಯನ್ನು ಯೋಗೀಶ್ ತೋಟ ಅವರು ನಿರ್ವಹಿಸಿ, ನೀತೀನ್ ಕುಮಾರ್ ಬಿ.ಆರ್. ನಗರ ಅವರು ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಸುರಕ್ಷಾ ಸಂಗಮದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!