Saturday, May 4, 2024
spot_imgspot_img
spot_imgspot_img

ಕಲ್ಲಡ್ಕ: ಶ್ರೀ ಗಣೇಶ ಮಂದಿರ ಆಡಳಿತ ಟ್ರಸ್ಟ್ (ರಿ)ಗಣೇಶ ನಗರ ಗೋಳ್ತಮಜಲು ಇದರ ಆಶ್ರಯದಲ್ಲಿ 32ನೇ ವರ್ಷದ ಶ್ರೀ ಗಣೇಶೋತ್ಸವ

- Advertisement -G L Acharya panikkar
- Advertisement -

ಕಲ್ಲಡ್ಕ: ಶ್ರೀ ಗಣೇಶ ಮಂದಿರ ಆಡಳಿತ ಟ್ರಸ್ಟ್ (ರಿ)ಗಣೇಶ ನಗರ ಗೋಳ್ತಮಜಲು ಇದರ ಆಶ್ರಯದಲ್ಲಿ ಉತ್ಸವ ಸಮಿತಿ,ಮಹಿಳಾ ಸಮಿತಿ ಹಾಗೂ ಸಾರ್ವಜನಿಕ ಸಹಕಾರದಿಂದ 32ನೇ ವರ್ಷದ ಶ್ರೀ ಗಣೇಶೋತ್ಸವ ಹಾಗೂ ಗಣೇಶ ಮಂದಿರದ 14 ನೇ ವರ್ಷದ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ಗಣೇಶ ಮಂದಿರದಲ್ಲಿ ನಡೆಯಿತು.

ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಬೆಳಿಗ್ಗೆ ವಿಗ್ರಹ ಪ್ರತಿಷ್ಠೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವು ಮಂದಿರದ ಗೌರವಾಧ್ಯಕ್ಷ ಶ್ಯಾಮ್ ಭಟ್ ಜಿ.ತೋಟ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಧಾರ್ಮಿಕ ಉಪನ್ಯಾಸಗೈದ ನೀರಪಾದೆ ಶಾಲೆಯ ಶಾರೀರಿಕ ಶಿಕ್ಷಕ ಜಗದೀಶ್ ಕಲ್ಲಡ್ಕ ಅದೆಷ್ಟೋ ಪರಕೀಯರ ದಾಳಿಯ ನಂತರ ಭಾರತ ತನ್ನ ತನವನ್ನು ಉಳಿಸಿತ್ತು. ಆದರೆ ಇಂದು ನಮ್ಮದೇ ಆದ ತಪ್ಪಿನಿಂದ ನಮ್ಮ ಸಂಸ್ಕ್ರತಿಯು ಅದಃ ಪತನಗೊಳ್ಳುತ್ತಿದೆ. ಪ್ರಕೃತಿಯ ಜೊತೆ ಚೆಲ್ಲಾಟವಾಡದೆ ಅದರ ಜೊತೆ ಬದುಕೋಣ. ನಮ್ಮ ಸಂಸ್ಕ್ರತಿ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಿಳಿಸೋಣ ಎಂದು ಸಮಯೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಮಂದಿರದ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಕಾರ್ಯದರ್ಶಿ ಚಂದ್ರಶೇಖರ ಟೈಲರ್, ಹಿರಿಯರಾದ ಸುಂದರ ಆಳ್ವ ಗೋಳ್ತಮಜಲುಗುತ್ತು, ಉತ್ಸವ ಸಮಿತಿಯ ಅಧ್ಯಕ್ಷ ತಿಲಕ್ ರಾಜ್ ಹೊಸೈಮಾರ್,ಮಹಿಳಾ ಸಮಿತಿಯ ಅಧ್ಯಕ್ಷೆ ನಳಿನಿ ಡೊಂಬಯ್ಯ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶರಣ್ಯ.ಜಿ ಆಚಾರ್ಯ ಗಣೇಶ್ ಕೋಡಿ ಪ್ರಾರ್ಥಿಸಿದರು. ಚಂದ್ರಶೇಖರ್ ಟೈಲರ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಆಟೋಟ ಸ್ವರ್ಧೆಯ ಬಹುಮಾನ ವಿಜೇತರ ಹೆಸರನ್ನುಮೋನಪ್ಪ ಜಿ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಮೋನಪ್ಪ ದೇವಸ್ಯ ವಂದಿಸಿ ರವೀಶ್ ಆಚಾರ್ಯ ಗಣೇಶ್ ಕೋಡಿ ನಿರ್ವಹಿಸಿದರು.

- Advertisement -

Related news

error: Content is protected !!