- Advertisement -
- Advertisement -



ಕಲ್ಲಡ್ಕ: ಇತ್ತೀಚೆಗೆ ಜರುಗಿದ ಕಲ್ಲಡ್ಕ ಸಮೀಪದ ಶ್ರೀ ಚೆಂಡೆ ಕಲ್ಲುರ್ಟಿ ದೈವಸ್ಥಾನದ ವಾರ್ಷಿಕ ಅಗೆಲು ಸೇವೆ ಸಮಯದಲ್ಲಿ ಯುವ ಗಾಯಕಿ ಕುಮಾರಿ ದಿವ್ಯನಿಧಿ ರೈ ಎರುಂಬು ಇವರಿಗೆ ಮಾನ್ಯ ಶಾಸಕರಾದ ಶ್ರೀ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಇವರು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಚೆನ್ನಪ್ಪ ಕೋಟ್ಯಾನ್, ಕುಂಞಣ್ಣ ಶೆಟ್ಟಿ ಕೋರ್ಯೊಟ್ಟು ಗುತ್ತು , ಗೋಳ್ತಮಜಲು ಸುಂದರ ಶೆಟ್ಟಿ, ರತ್ನಾಕರ ಶೆಟ್ಟಿ ಮೂಡಾಯುರು, ಮೋಹನ್ ದಾಸ್ ರೈ ಎರುಂಬು , ಮೋಹನ್ ಪಿ.ಎಸ್ , ಸತೀಶ್ ರೈ ಹಾಗೂ ದೈವಸ್ಥಾನದ ಆಡಳಿತದಾರರಾದ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಶ್ರೀಮತಿ ಪ್ರತಿಭಾ ಶ್ರೀಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಭಕ್ತರ ಸಮ್ಮುಖದಲ್ಲಿ ಅಗೆಲು ಸೇವೆ ಅತ್ಯಂತ ಸಾಂಘವಾಗಿ ನೆರವೇರಿತು ಮತ್ತು ದಿವ್ಯನಿಧಿ ರೈ ಎರುಂಬು ಬಳಗದಿಂದ ‘ಸ್ವರಸಮರ್ಪಣೆ’ ಸಂಗೀತ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜರುಗಿತು.
- Advertisement -








