

ಕಲ್ಲಡ್ಕ: ಯುವ ಬಂಟರ ಸಂಘ ಕಲ್ಲಡ್ಕ ವಲಯ ಇದರ ನೇತೃತ್ವದಲ್ಲಿ ಕಲ್ಲಡ್ಕ ವಲಯ ಬಂಟರ ಸಂಘ ಮತ್ತು ಮಹಿಳಾ ಬಂಟರ ಸಂಘದ ಸಹಯೋಗದಲ್ಲಿ ವಲಯ ಮಟ್ಟದ ಬಂಟ್ಸ್ ಪ್ರೀಮಿಯರ್ ಲೀಗ್ 2025 ಕ್ರಿಕೆಟ್ ಪಂದ್ಯಾಟವು ಪಾಣೆಮಂಗಳೂರು ಗ್ರಾಮದ ಬೊಂಡಾಲದಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಲ್ಲಡ್ಕ ವಲಯ ಯುವ ಬಂಟರ ಸಂಘದ ಅಧ್ಯಕ್ ಸಂತೋಷ್ ಶೆಟ್ಟಿ ಶೀನಾಜೆ ವಹಿಸಿದ್ದರು. ಪಂದ್ಯಾಟವನ್ನು ವಲಯ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ರೈ ಕಲ್ಲಡ್ಕ ಉದ್ಘಾಟಿಸಿ ಶುಭ ಹಾರೈಸಿದರು. ಕ್ರೀಡಾಕೂಟದಲ್ಲಿ ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಮಹಿಳಾ ವಿಭಾಗದ ಅಧ್ಯಕ್ಷ ರಮಾ ಎಸ್ ಭಂಡಾರಿ, ಉದ್ಯಮಿಗಳಾದ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ದಾಮೋದರ ಶೆಟ್ಟಿ ಸುಧೆಕ್ಕಾರು, ವಲಯ ಬಂಟ ಸಂಘದ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು, ಬಂಟ್ಸ್ ಅಟ್ಯಾಕರ್ಸ್ ತಂಡದ ರತ್ನಾಕರ ಶೆಟ್ಟಿ ಕಲ್ಲಡ್ಕ, ಬಂಟ್ಸ್ ರಾಯಲ್ಸ್ ತಂಡದ ಸಂತೋಷ್ ಶೆಟ್ಟಿ ಸುಧೆಕ್ಕಾರು ಉಪಸ್ಥಿತರಿದ್ದರು.
ಒಟ್ಟು 6 ತಂಡಗಳ ನಡುವಿನ ನಡೆದ ಲೀಗ್ ಪಂದ್ಯಾಟದಲ್ಲಿ ಪದ್ಮನಾಭ ರೈ ಕಲ್ಲಡ್ಕ ಮಾಲಿಕತ್ವದ ಬಂಟ್ಸ್ ವಾರಿಯರ್ಸ್ ತಂಡ ಪ್ರಥಮ, ಸಂದೀಪ್ ಶೆಟ್ಟಿ ಅರೆಬೆಟ್ಟು ಮಾಲಿಕತ್ವದ ಬಂಟ್ಸ್ ಟೈಗರ್ಸ್ ತಂಡ ದ್ವಿತೀಯ, ಸತೀಶ್ ಶೆಟ್ಟಿ ಬೊಂಡಾಲ ಮಾಲಿಕತ್ವದ ಬಂಟ್ಸ್ ಚಾಲೆಂಜರ್ಸ್ ತಂಡ ತೃತೀಯ, ಸಂತೋಷ್ ಶೆಟ್ಟಿ ಪೇಲತಡ್ಕ ಮಾಲಿಕತ್ವದ ಬಂಟ್ಸ್ ಸ್ಟ್ರೈಕರ್ಸ್ ತಂಡ ಚತುರ್ಥ ಪ್ರಶಸ್ತಿಯನ್ನು ಪಡೆಯಿತು.
ನಾಗೇಶ್ ಶೆಟ್ಟಿ ಬೊಂಡಾಲ ಮತ್ತು ಸುನಾದ್ ರಾಜ್ ಶೆಟ್ಟಿ ಬೊಂಡಾಲ ಕಾರ್ಯಕ್ರಮ ನಿರೂಪಿಸಿದರು, ಕೌಶಿಕ್ ಶೆಟ್ಟಿ ವೀಕ್ಷಕ ವಿವರಣೆ ನೀಡಿದರು, ಯುವ ಬಂಟರ ಸಂಘದ ಸದಸ್ಯರು ಸಹಕರಿಸಿದರು.