Sunday, May 5, 2024
spot_imgspot_img
spot_imgspot_img

ಪುಂಜಾಲಕಟ್ಟೆ: ಮಾಜಿ ಕಂಬಳ ಓಟಗಾರ ಜಯ ಶೆಟ್ಟಿ ಕಿಂಜಾಲು ಅಸ್ತಂಗತ

- Advertisement -G L Acharya panikkar
- Advertisement -

ಪುAಜಾಲಕಟ್ಟೆ: ಮಾಜಿ ಕಂಬಳ ಓಟಗಾರ, ಧಾರ್ಮಿಕ, ಸಹಕಾರಿ ಮುಂದಾಳು ಉಳಿಗ್ರಾಮದ ಕಕ್ಯಪದವು, ಕಿಂಜಾಲು ನಿವಾಸಿ ಜಯ ಶೆಟ್ಟಿ ಕಿಂಜಾಲು(65) ಅವರು ಅಸೌಖ್ಯದಿಂದ ಜೂ.27ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದ ಜಯ ಶೆಟ್ಟಿ ಅವರು ಕಂಬಳಕ್ಷೇತ್ರದಲ್ಲಿ ಓಟಗಾರರರಾಗಿ ಪ್ರಖ್ಯಾತಿ ಪಡೆದಿದ್ದರು, ಅವರು ಕಂಬಳ ಕ್ಷೇತ್ರದ ಅದ್ವಿತೀಯ ಸಾಧನೆಗಾಗಿ ಹಲವಾರು ಪ್ರಶಸ್ತಿ, ಸಮ್ಮಾನ ಪಡೆದಿದ್ದರು. ಸುಮಾರು 70 ರ ದಶಕದ ಆರಂಭದಲ್ಲಿ ಕಕ್ಯಪದವು ಡೀಕಯ್ಯ ಪೂಜಾರಿ, ಪುಣ್ಕೆದಡಿ ಅಣ್ಣು ಭಂಡಾರಿ ಅವರ ಕೋಣಗಳನ್ನು ಓಡಿಸುತ್ತಿದ್ದ ಅವರು ಬಳಿಕ ಕಾಡಬೆಟ್ಟು ದಿ.ನಾರಾಯಣ ರೈ ಅವರ ಕೋಣಗಳನ್ನು ಹಗ್ಗ ಹಿರಿಯ ವಿಭಾಗದಲ್ಲಿ ಓಡಿಸುತ್ತಿದ್ದು, ಸುಮಾರು ಒಂದೂವರೆ ದಶಕಗಳ ಕಾಲ ನಿರಂತರ ಪದಕ ಪಡೆದು ನಂಬರ್ ಒನ್ ಸ್ಥಾನದಲ್ಲಿ ವಿರಾಜಿಸಿದ್ದರು.

ಆದರೆ ಯಾವುದೇ ಸಂಭಾವನೆ ಪಡೆಯದೆ ಕಂಬಳದ ಸೇವೆ ಸಲ್ಲಿಸಿದ ಹಿರಿಮೆ ಅವರದ್ದಾಗಿತ್ತು. ಸ್ವಾಮಿ ನಿಷ್ಠ ಓಟಗಾರ ಎಂಬ ಗೌರವ ಪಡೆದಿದ್ದರು. ಯುವ ಓಟಗಾರರಿಗೆ ಮಾರ್ಗದರ್ಶಕರಾಗಿದ್ದರು. ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಕಂಬಳ ಕ್ಷೇತ್ರ ಕಂಬನಿ ಮಿಡಿದಿದೆ. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!