

ಕಂಬಳಬೆಟ್ಟು: ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ ಮಲರಾಯ ಜೇರದಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ಶ್ರೀ ದೈವಗಳಿಗೆ ತಂಬಿಲ ಸೇವೆ ನಡೆಯಲಿದ್ದು ಇದೇ ಜನವರಿ 14 ರಂದು ಮಕರ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ಮೊದಲ ಸಂಕ್ರಮಣ ತಂಬಿಲ ಸೇವೆ ನಡೆಯಲಿದೆ.
14-01-2025 ನೇ ಮಂಗಳವಾರದಂದು ಸಂಜೆ 6.30 ರಿಂದ ತಂಬಿಲ ಸೇವೆ ಪ್ರಾರಂಭಗೊಳ್ಳಲಿದೆ.ರಾತ್ರಿ 7.30 ಕ್ಕೆ ಮಹಾ ಮಂಗಳಾರತಿ ನಡೆದು ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ತಂಬಿಲ ಸೇವೆ ನಡೆಸುವವರು 14 ನೇ ತಾರೀಕು ಬೆಳಿಗ್ಗೆ 10ಗಂಟೆಯ ಒಳಗಾಗಿ ತಿಳಿಸಬೇಕು, ಈ ಎಲ್ಲಾ ಕಾರ್ಯಗಳಲ್ಲಿ ಪಾಲ್ಗೊಂಡು ದೈವಗಳ ಪ್ರಸಾದ ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಂಡುವಂತೆ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇವೆಗಳ ವಿವರ:
ಶ್ರೀ ಕ್ಷೇತ್ರದಲ್ಲಿ ತಂಬಿಲ ಸೇವೆ , ಪ್ರಾರ್ಥನಾ ಸೇವೆ, ಅನ್ನದಾನ ಸೇವೆ, ಸಂಕ್ರಮಣದ ಸಂಪೂರ್ಣ ಸೇವೆ ಮುಂದಿನ ಪ್ರತಿ ಸಂಕ್ರಮಣದಂದು ನಡೆಯಲಿದೆ.
ಸೇವೆ ನಡೆಸುವವರು ಈ ನಂಬರುಗಳನ್ನು ಸಂಪರ್ಕಿಸಬಹುದು.
7795299112
7624925743
9481143223