Tuesday, June 25, 2024
spot_imgspot_img
spot_imgspot_img

ಕಂಬಳಬೆಟ್ಟು – ನೇರ್ಲಾಜೆ ಕಾಂಕ್ರೀಟ್ ರಸ್ತೆ ಕುಸಿತ…!

- Advertisement -G L Acharya panikkar
- Advertisement -

ವಿಟ್ಲ:ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳ ಬೆಟ್ಟು ನೇರ್ಲಾಜೆ ರಸ್ತೆಯ ಅರ್ಕೆಚ್ಚಾರು ಎಂಬಲ್ಲಿ ಕಾಂಕ್ರೀಟ್ ರಸ್ತೆ ಕುಸಿದ ಕಾರಣ ವಾಹನ ಸಂಚಾರಕ್ಕೆ ಮತ್ತು ಜನರಿಗೆ ತೊಂದರೆಯಾಗಿದೆ. ಈ ಕುಸಿತದ ಪರಿಣಾಮವಾಗಿ ರಸ್ತೆಯಲ್ಲಿ ಹೋಗುವ ವಾಹನ ಸವಾರರು ಹಾಗು ಜನರು ಭಯಭೀತರಾಗಿದ್ದಾರೆ. ಪ್ರತೀ ವರ್ಷ ಈ ರಸ್ತೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಆಗಬೇಕೆಂದು ಊರಿನ ಜನರು ಆಗ್ರಹಿಸಿದ್ದಾರೆ.

ಈ ರಸ್ತೆಯ ಸಮೀಪ ಸಣ್ಣ ಹೊಳೆ ಹರಿಯುತ್ತಿದ್ದು, ಈ ಕಾಂಕ್ರೀಟ್ ರಸ್ತೆಯು ಇನ್ನು ಹೆಚ್ಚು ಕುಸಿಯಬಹುದೆಂದು ಮಕ್ಕಳು, ಸಾರ್ವಜನಿಕರು ಓಡಾಡಲು ಭಯಭೀತರಾಗಿದ್ದಾರೆ.ಈ ಮೂಲಕ ಹೆಚ್ಚಿನ ದುರಂತ ಸಂಭವಿಸುವ ಮೊದಲು ಸಂಬಂಧ ಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.

- Advertisement -

Related news

error: Content is protected !!