Sunday, January 26, 2025
spot_imgspot_img
spot_imgspot_img

ಕಂಬಳಬೆಟ್ಟು: ಧರ್ಮನಗರ ವೈದ್ಯನಾಥ ಮಲರಾಯ ಜೇರ ಕ್ಷೇತ್ರದಲ್ಲಿ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ

- Advertisement -
- Advertisement -

350 ವರ್ಷಗಳ ಬಳಿಕ ವೈಭವದ ನೇಮೋತ್ಸವವನ್ನು ಭಕ್ತಿ ಭಾವದಿಂದ ಕಣ್ತುಂಬಿಕೊಂಡ ಭಕ್ತಸಾಗರ

ಕಂಬಳಬೆಟ್ಟು: 800 ವರ್ಷಗಳ ಇತಿಹಾಸ ಹೊಂದಿರುವ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ) ಮಲರಾಯ ಜೇರದಲ್ಲಿ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ಕಾರ್ಯಕ್ರಮ ಡಿ. 21 ರಿಂದ 25 ರವರೆಗೆ ಬಹಳ ಅದ್ದೂರಿಯಾಗಿ ನಡೆಯಿತು.

ಡಿ. 21 ರಂದು ಮಲರಾಯ ಜೇರ ಕೇತ್ರಕ್ಕೆ ವಿಶೇಷ ಆಕರ್ಷಣೆಯೊಂದಿಗೆ ಹಲವು ಕಡೆಗಳಿಂದ ಸುಮಾರು 30 ಕ್ಕೂ ಹೆಚ್ಚು ಪಿಕಪ್‌ ವಾಹನಗಳಲ್ಲಿ ಹಸಿರುಹೊರಕಾಣಿಕೆ ಸಾಗಿಬಂತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ವಸಂತ್ ಕುಮಾರ್ ಅಮೈ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲ ಇವರು ಆಶೀರ್ವಚನ ನೀಡಿದರು. ಸಭೆಯಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಂಜೆ ಪೂರ್ಣಕುಂಭ ಸ್ವಾಗತದೊಂದಿಗೆ ಬ್ರಹ್ಮಶ್ರೀ ಆಲಂಪಾಡಿ ಪದ್ಮನಾಭ ತಂತ್ರಿಯವರ ಆಗಮನವಾಗಿ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ ಮುಳಿಯ ಕೇಶವ ಪ್ರಸಾದ್ ನಿಕಟಪೂರ್ವ ಅಧ್ಯಕ್ಷರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಧರ್ಮನಗರ ಬಾಲಗೋಕುಲ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ವಿಠಲ್ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ವೈವಿಧ್ಯ ವಿನೂತನ ಕಾರ್ಯಕ್ರಮ ನಡೆಯಿತು.

ಡಿ. 22 ನೇ ಆದಿತ್ಯವಾರ ಬೆಳಗ್ಗೆ ಗಣಪತಿಹವನ, ಸ್ಥಳಶುದ್ಧಿ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮ ನೆರವೇರಿತು. ನಂತರ ಜೈದೀಪ್ ಅಮೈ ನೇತೃತ್ವದ ಕಲಾತಪಸ್ವಿ ಸಾಂಸ್ಕೃತಿಕ ತಂಡದಿAದ ಅಮೋಘ ಮನೋರಂಜನಾ ಕಾರ್ಯಕ್ರಮ ನಡೆಯಿತು. ಸುಧಾಕರ ಶೆಟ್ಟಿ ಬೀಡಿನಮಜಲು ಉಪಾಧ್ಯಕ್ಷರು ಸ್ವಾಗತ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಧಾರ್ಮಿಕ ಉಪನ್ಯಾಸ ನೆರವೇರಿಸಿಕೊಟ್ಟರು. ಸಭೆಯಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಬಳಿಕ ಸಂಜೆ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶ ಪೂಜೆ, ಸೇರಿದಂತೆ ಹಲವು ಪೂಜಾ ಕಾರ್ಯಗಳು ನಡೆದವು. ನಂತರ ಬಂಗಾರು ಅರಸರು ವಿಟ್ಲ ಅರಮನೆ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಸಮಾರೋಪದಲ್ಲಿ ಯೋಗಾನಂದ ಸರಸ್ವತಿ ಸ್ವಾಮೀಜಿ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇವರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಅನುರಾಧ ಅಡ್ಕಸ್ಥಳ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮೂಡಿಬಂತು. ನಂತರ ನಮ್ಮ ಕಲಾವಿದೆರ್ ಬೆದ್ರ ಅಭಿನಯದ ಮನಸ್ ಮೈದಾನ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

ಡಿ.23 ನೇ ಸೋಮವಾರ ಬೆಳಗ್ಗೆ ಮಹಾಗಣಪತಿ ಹವನ, ಪ್ರಸಾದ ಪ್ರತಿಷ್ಠೆ , ಪೀಠ ಪ್ರತಿಷ್ಠೆ ನಡೆದು ಕುಂಭೇಶ ಕಲಶ ಅಭಿಷೇಕ, ನಿದ್ರಾ ಕಲಶ ಅಭಿಷೇಕ, ಜೀವ ಕಲಶ ಅಭಿಷೇಕ, ಸಾನ್ನಿಧ್ಯವೃದ್ಧಿ ಬ್ರಹ್ಮಕಲಶ ಅಭಿಷೇಕ ನಡೆಯಿತು. ನಂತರ ಪ್ರತಿಷ್ಠಾ ಬಲಿ, ದೈವಗಳಿಗೆ ಬ್ರಹ್ಮಕಲಶ ಅಭಿಷೇಕ, ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನಡೆದು ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವರುಣ್ ಆಚಾರ್ಯ ಬಂಟ್ವಾಳ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ಹಾಗೂ ಗಡಿನಾಡ ಕನ್ನಡ ಧ್ವನಿ ರಾಜ್ಯ ಪ್ರಶಸ್ತಿ ಪುರಸ್ಕೃತ ಧರಣ್ ಮಾಣಿ ಇವರಿಂದ ಶ್ರೀ ಹರಿನಾಮ ಸಂಕೀರ್ತನೆ ನಡೆಯಿತು.

ರಾತ್ರಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ರಜ ಕ್ಷೇತ್ರ ಪಾವಂಜೆ ಹಳೆಯಂಗಡಿ ಇವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.

ಡಿ.24 ರಂದು ಡೆಚ್ಚಾರು ಮಲರಾಯ ಸನ್ನಿಧಿಯಲ್ಲಿ ತಂಬಿಲ ಸೇವೆ ಪ್ರಾರ್ಥನೆ ನಡೆದು ಭಂಡಾರ ಹೊರಟು, ಜೈನರಕೋಡಿ ಮೂವರ್‌ದೈವಂಗಳ್ ಸನ್ನಿಧಿಯಲ್ಲಿ ಪ್ರಾರ್ಥನೆ ಬಳಿಕ ಭಂಡಾರ ಹೊರಟಿತು. ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಭಂಡಾರ ಆಗಮಿಸಿ, ಕುಳಗುತ್ತ್ತು ಚಾವಡಿಯಲ್ಲಿ ಪ್ರಾರ್ಥನೆ ಮಾಡಿ ವೈದ್ಯನಾಥನ ಭಂಡಾರ ಹೊರಟಿತು. ಬಳಿಕ ಸಾಯಂಕಾರ ಉರಿಮಜಲು ನಡುಸಾದಿ (ನಡುದಾರಿ) ಎಂಬಲ್ಲಿ ವೈದ್ಯನಾಥ, ಮಲರಾಯ, ಮೂವರ್‌ದೈವಂಗಳ್ ಸಪರಿವಾರ ದೈವಗಳ ಭಂಡಾರವನ್ನು ಮೂರು ಗ್ರಾಮದ ಸಮಸ್ತ ಭಕ್ತರು ಎದುರುಗೊಂಡರು. ರಾತ್ರಿ ಮಲರಾಯ ಜೇರಕ್ಕೆ ಭಂಡಾರ ಆಗಮನವಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇವರಿಂದ ಗಾನ-ನೃತ್ಯ ಸಂಭ್ರಮ ನಡೆಯಿತು.

ಬಳಿಕ ವೈದ್ಯನಾಥ ನೇಮೋತ್ಸವ ನಡೆದು, ಮುಖ್ಯರಸ್ತೆಯಲ್ಲಿರುವ ಗಣಪತಿ ಕೆರೆಯಲ್ಲಿ ವೈದ್ಯನಾಥ ದೈವದ ಜಳಕ ಕಾರ್ಯಕ್ರಮ ನಡೆದು ವಿಶೇಷವಾದ ಆಕರ್ಷಣೀಯ ಸುಡುಮದ್ದು ಪ್ರದರ್ಶನ ನಡೆಯಿತು. ನಂತರ ಮೂವರ್ ದೈವಂಗಳ ನೇಮೋತ್ಸವ ನಡೆಯಿತು.

ಡಿ.25 ರಂದು ಬೆಳಗ್ಗೆ ಮಲರಾಯ ದೈವದ ನೇಮೋತ್ಸವ ನಡೆಯಿತು. ಬಳಿಕ ಪ್ರಸಾದ ವಿತರಣೆ, ನಡೆಯಿತು. ಸಾಯಂಕಾಲ ಪ್ರಧಾನ ದೈವಗಳ ಭಂಡಾರ ಮೂಲ ಸ್ಥಾನಕ್ಕೆ ಹೊರಟಿತು. ರಾತ್ರಿ ಕೊರತಿ ಗುಳಿಗ ದೈವಗಳ ನೇಮೋತ್ಸವ ನಡೆಯಿತು.

ಒಟ್ಟು 5 ದಿನಗಳವರೆಗೆ ನಡೆದ ನಡೆದ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ರಾತ್ರಿ ಹಗಲು ನಿತ್ಯ ನಿರಂತರವಾಗಿ ಅನ್ನಸಂತರ್ಪಣೆ ಸಾಗಿಬಂತು. ಸುಮಾರು 350 ವರ್ಷಗಳ ಬಳಿಕ ನಡೆದ ವೈದ್ಯನಾಥ, ಮಲರಾಯ ಸಪರಿವಾರ ದೈವಗಳ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೈವಗಳ ಕೃಪೆಗೆ ಪಾತ್ರರಾದರು.

ಈ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕರು ಅಶೋಕ್‌ ಕುಮಾರ್‌ ರೈ, ಮಾಜಿ ಶಾಸಕರು ಸಂಜೀವ ಮಠಂದೂರು, ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಪುತ್ತೂರು, ರಾಜ್ಯ ಸರ್ಕಾರ ಧಾರ್ಮಿಕ ಪರಿಷತ್‌ ಸದಸ್ಯರು ಮಲ್ಲಿಕಾ ಪಕಳ, ಸತೀಶ್‌ ಆಳ್ವ ಇರಾಬಾಳಿಕೆ, ಶ್ರೀಧರ್‍ ಶೆಟ್ಟಿ ಗುಬ್ಯ ಮೇಗಿನಗುತ್ತು, ಕ್ಯಾಪ್ಟನ್‌ ಬ್ರಜೇಶ್‌ ಚೌಟ ಸಂಸದರು ಮಂಗಳೂರು ಲೋಕಸಭಾ ಕ್ಷೇತ್ರ, ಅರುಣ್‌ ಕುಮಾರ್‌ ಪುತ್ತಿಲ, ಬಿಜೆಪಿ ಮುಖಂಡರು, ಶಕುಂತಳಾ ಟಿ ಶೆಟ್ಟಿ, ಮುಳಿಯ ಕೇಶವ ಪ್ರಸಾದ್‌ ನಿಕಟಪೂರ್ವ ಅಧ್ಯಕ್ಷರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಈಶ್ವರ್‍ ಭಟ್‌ ಪಂಜಿಗುಡ್ಡೆ, ಸಹಕಾರಿ ಭಾರತೀ ರಾಷ್ಟ್ರೀಯ ಉಪಾಧ್ಯಕ್ಷರು ಪದ್ಮನಾಭ ಕೊಂಕೋಡಿ, ಸುರೇಶ್‌ ಮುಕ್ಕುಡ, ನಿಕಟಪೂರ್ವ ಆಡಳಿತ ಮೊಕ್ತೇಸರರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ, ದಯಾನಂದ ಶೆಟ್ಟಿ ಉಜಿರೆಮಾರ್‍ ಅಧ್ಯಕ್ಷರು ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ, ಸಹಜ್ ರೈ ಬಳಜ್ಜ ಸ್ಥಾಪಕಾಧ್ಯಕ್ಷರು ವಿಜಯ ಸಾಮ್ರಾಟ್‌ ಪುತ್ತೂರು, ಡಾ. ಬಿ ಸಂಜೀವ ರೈ ಡೀನ್ ಫಾದರ್‌ಮುಲ್ಲರ್‌ ಆಸ್ಪತ್ರೆ ಮಂಗಳೂರು, ಪ್ರಕಾಶ್‌ ಕೆ ಎಸ್‌ ಉರಿಮಜಲು, ಯೋಗೀಶ್‌ ಕುಡ್ವ, ಕುಡ್ವ ಮನೆತೆನ ಕುಂಡಡ್ಕ, ಮಾಧವ ಮಾವೆ ಸಾಲೆತ್ತೂರು, ಉದ್ಯಮಿ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು ವೇಣುಗೋಪಾಲ ಶೆಟ್ಟಿ ಮರುವಾಳ, ನವಚೇತನ ಚಿಟ್‌ಫಂಡ್‌ ಮಂಗಳೂರು ಇದರ ಆಡಳಿತ ನಿರ್ದೇಶಕ ಲೋಕೇಶ್‌ ಶೆಟ್ಟಿ ಕಲ್ಲಂದಡ್ಕ, ಸುಧೀರ್‌ ಕುಮಾರ್‌ ಶೆಟ್ಟಿ ಮಿತ್ತೂರು, ಮಾಜಿ ಉಪಾಧ್ಯಕ್ಷರು ಇಡ್ಕಿದು ಗ್ರಾಮ ಪಂಚಾಯತ್‌, ರಾಜರಾಮ್‌ ಶೆಟ್ಟಿ ಕೋಲ್ಪೆಗುತ್ತು, ಇಂಡಿಯಾ ಸೋಶಿಯಲ್‌ &ಕಲ್ಚರ್‌ ಸೆಂಟರ್‌ ಅಬುದಾಬಿ ಅಧ್ಯಕ್ಷರು ಮಿತ್ರಂಪಾಡಿ ಜಯರಾಮ್‌ ರೈ, ಹಾರೆಕೆರೆ ನಾರಾಯಣ್‌ ಭಟ್‌, ಅಧ್ಯಕ್ಷರು ಶ್ರೀ ರಾಮಚಂದ್ರಾಪುರ ಶಾಖಾಮಠ ಪೇರಾಜೆ ಮಾಣಿ, ಉದ್ಯಮಿ, ಪ್ರವೀಣ್‌ ಶೆಟ್ಟಿ ಅಳಕೆಮಜಲು, ಹಾಲ್ತೋಟ ಶಂಕರ್‌ ಭಟ್‌ ಖ್ಯಾತ ಉದ್ಯಮಿ ಬೆಂಗಳೂರು, ಸುಭಾಷ್‌ ನಾಯಕ್‌ ಉದ್ಯಮಿಗಳು ವಿಟ್ಲ, ರವೀಂದ್ರ ಅಡ್ಯಂತಾಯ ಕುಳಗುತ್ತು, ರಾಧಕೃಷ್ಣ ರೈ ಬೂಡಿಯಾರು ಮಾಜಿ ಅಧ್ಯಕ್ಷರು ಎಪಿಎಂಸಿ ಪುತ್ತೂರು, ಚಂದ್ರಹಾಸ ಶೆಟ್ಟಿ ಅಧ್ಯಕ್ಷರು ಕೋಟಿ ಚೆನ್ನಯ ಕಂಬಳ ಸಮಿತಿ ಪುತ್ತೂರು, ಲೋಕನಾಥ ಶೆಟ್ಟಿ ಮರುವಾಳ, ಡಾ.ಕೆ.ಬಿ ರಾಜರಾಮ್‌ ಗಿರಿಜಾ ಡೆಂಟಲ್ ಕ್ಲಿನಿಕ್‌ ಉಪ್ಪಿನಂಗಡಿ, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!