Sunday, October 6, 2024
spot_imgspot_img
spot_imgspot_img

ಶ್ರೀಧಾಮ ಕ್ಷೇತ್ರ ದಲ್ಲಿ-“ವರಮಹಾಲಕ್ಷ್ಮಿ”ಪೂಜೆ

- Advertisement -
- Advertisement -

ವರದಿಕಿರಣ್ ಕೋಟ್ಯಾನ್ ಕೇಪು.

ಇಂದು ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ವರಗಳನ್ನು ದಯಪಾಲಿಸೋ ವರಮಹಾಲಕ್ಷ್ಮೀಯ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಶ್ರೀ ಧಾಮ ಮಹಾಲಕ್ಷ್ಮಿಕ್ಷೇತ್ರ ದಲ್ಲಿ ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.

 ವರಮಹಾಲಕ್ಷ್ಮೀ ಹಬ್ಬ ಹೆಸರೇ ಸೂಚಿಸುವಂತೆ ಇದು ಲಕ್ಷ್ಮೀ ದೇವಿಯನ್ನು ಪೂಜಿಸುವ, ಆರಾಧಿಸುವ ದಿನ. ಹಬ್ಬಗಳಲ್ಲೇ ವರಮಹಾಲಕ್ಷ್ಮೀ ಹಬ್ಬ ಎಂದರೆ ಗೃಹಿಣಿಯರಿಗೆ ಒಂದು ರೀತಿಯ ಸಂಭ್ರಮ. ಲಕ್ಷ್ಮೀ ಎಂದರೆ ಹಣ, ಸಂಪತ್ತು, ಐಶ್ವರ್ಯ ನೀವು ಯಾವ ಹೆಸರಿನಿಂದ ಬೇಕಾದರೂ ಕರೆಯಬಹುದು. ಎಂಟು ಸಂಪತ್ತುಗಳು ಎಂದರೆ ಸಿರಿ, ಭೂಮಿ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ಸಂತೋಷ, ಪುಷ್ಟಿ(ಬಲ) ಈ ಪ್ರತಿಯೊಂದು ಶಕ್ತಿಯನ್ನು ಲಕ್ಷ್ಮೀ ಎಂದು ಕರೆಯಲಾಗುತ್ತದೆ. ಹೀಗೆ  ಹಲವಾರು ನಾಮಗಳಿಂದ ಕರೆಯಲ್ಪಡುವ ಲಕ್ಷ್ಮೀಯನ್ನು ಶ್ರಾವಣ ಮಾಸದಲ್ಲಿ ಭಕ್ತಿಯಿಂದ ವ್ರತ ಆಚರಿಸಿ ಪೂಜಿಸುವುದರಿಂದ  ಲಕ್ಷ್ಮೀಯು ಸಂತೃಪ್ತಳಾಗಿ ಭಕ್ತರ ಬಯಕೆಗಳನ್ನು ಈಡೇರಿಸುತ್ತಾಳೆ ಮತ್ತು ತನ್ನ ಭಕ್ತರಿಗೆ ಉತ್ತಮ ಸಂಪತ್ತನ್ನು ಕರುಣಿಸುತ್ತಾಳೆ ಎಂಬುದು ನಂಬಿಕೆ. ಆದ್ದರಿಂದಲೇ ಈ ಹಬ್ಬವನ್ನು ‘ವರಮಹಾಲಕ್ಷ್ಮೀ’ ಹಬ್ಬ ಎಂದು ಆಚರಿಸಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಶ್ರೀಧಾಮ ಶ್ರೀ ಧಾಮ ಮಹಾಲಕ್ಷ್ಮಿಕ್ಷೇತ್ರ ವರಮಹಾಲಕ್ಷ್ಮಿ ಪೂಜೆ ಹಾಗೂ ವೃತವನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಗುತ್ತೆ. ವರಮಹಾಲಕ್ಷ್ಮಿ ಹಬ್ಬದ ಪೂರ್ವವಾಗಿ ಇಲ್ಲಿ ವಿಶೇಷ ಆಚರಣೆಗಳನ್ನು ಕೈಗೊಳ್ಳಲಾಗುತ್ತೆ. ಒಟ್ಟು  48 ದಿನಗಳ ಕಾಲ ವರಮಾಹಾಲಕ್ಷ್ಮಿ ವೃತವನ್ನು ಭಕ್ತಾಧಿಗಳು ಕೈಗೊಳ್ಳುತ್ತಾರೆ. ಊರಿನ ಭಕ್ತಾಧಿಗಳು ನಿತ್ಯ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಪುರಸ್ಕಾರಗಳಲ್ಲಿ ಭಾಗವಹಿಸ್ತಾರೆ. ಈ ಮೂಲಕ ವರಮಹಾಲಕ್ಷ್ಮಿಯನ್ನು ವಲಿಸಿಕೊಳ್ಳುತ್ತಾರೆ. ಗ್ರಾಮದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಪೂಜಾ ಹಾಗೂ ವೃತ ಕೈಕಂರ್ಯಗಳಲ್ಲಿ ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

ವರಮಹಾಲಕ್ಷ್ಮಿ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ವಿಶೇಷ ಪೂಜೆಗಳನ್ನೂ ಕೈಗೊಳ್ಳಲಾಗುತ್ತೆ. ಅದ್ರಲ್ಲಿ ಬಾಲ ಭೋಜನ ಒಂದಾಗಿದೆ. ಒಟ್ಟು 48 ದಿನಗಳ ಕಾಲ ಕ್ಷೇತ್ರದಲ್ಲಿ ಬಾಲ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದಲ್ಲಿ ವರಮಹಾಲಕ್ಷಿ ಪೂಜೆಯು ವಿಶೇಷ ವಾಗಿ ನೆರವೇರಿತು. ದಿನನಿತ್ಯದ ಭಜನೆ ಕಾರ್ಯಕ್ರಮ ದಿಂದ ಆರಂಭಗೊಂಡು ಮಹಾಲಕ್ಷ್ಮಿಗೆ ವಿಶೇಷ ಪೂಜೆ, ನಾಗದೇವರಿಗೆ ಹಾಲಿನ ಅಭಿಷೇಕದೊಂದಿಗೆ, ಕ್ಷೇತ್ರದಲ್ಲಿ ಇರುವ ದೈವ ದೇವರುಗಳಿಗು,ಗೋಪೂಜೆ  ಕೂಡ ಸ್ವಾಮೀಜಿ ಯವರ ನೇತ್ರತ್ವದಲ್ಲಿ ವಿಶೇಷ ಪೂಜೆ ನಡೆಯಿತು.ಭಕ್ತರು ಸಾಕಷ್ಟು ಮಂದಿ ಇದ್ದರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಪೂಜೆಯಲ್ಲಿ ಪಾಲ್ಗೊಂಡರು.ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಕಾಡುತ್ತಿರುವ ಕರೋನಾವೈರಸ್ ಬಿಕ್ಕಟ್ಟಿನ ನಡುವೆ ಈ ವರ್ಷ ಮೊದಲಿನಂತೆ ಸಡಗರ ಇಲ್ಲದಿದ್ದರೂ ಎಲ್ಲರೂ ಸಾಧ್ಯವಾದಷ್ಟು ತಮ್ಮ ತಮ್ಮ ಮನೆಗಳಲ್ಲಿ ಹಾಗು ಶ್ರೀಧಾಮ ಕ್ಷೇತ್ರ ದಲ್ಲಿ ವರಮಹಾಲಕ್ಷ್ಮಿ ಹಬ್ಬ ಸಂಪನ್ನಗೊಂಡಿತು.

ಕೊರೊನಾ ರೋಗದಿಂದ ಈ ಸಮಾಜ ಬೇಗ ಚೇತರಿಸಲಿ ಹಾಗೂ ಮಹಾಲಕ್ಷ್ಮಿ ಎಲ್ಲಾ ಕಷ್ಟ ಗಳನ್ನು ಪರಿಹರಿಸಲಿ,ಭಯಮುಕ್ತರಾಗಿ ಪ್ರತೀ ಕ್ಷಣವೂ ಆರೋಗ್ಯದ ಬಗ್ಗೆ ನಿಗಾ ವಹಿಸಿದಾಗ ಕೊರೊನಾದಂತಹ ರೋಗಗಳಿಂದಲೂ ನಮ್ಮನ್ನು ರಕ್ಷಿಸಿಕೊಳ್ಳ ಬಹುದು,ದೇಶದ ಭವಿಷ್ಯವನ್ನು ಉಳಿಸುವ ನಿಟ್ಟಿನಲ್ಲಿ ಒಟ್ಟಾಗಿ ಚಿಂತನೆ ನಡೆಸಬೇಕಾದ ಅವಶ್ಯಕತೆ ಇದೆ. ಆತ್ಮಸ್ಥೈರ್ಯ ತುಂಬುವ ಕಾರ್ಯವಾದಾಗ ದುಶ್ಚಟದಿಂದ ದೂರವಾಗಿಸಲು ಸಾಧ್ಯ,ದೇಶದ ಭವಿಷ್ಯದಲ್ಲಿ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದ್ದುಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

- Advertisement -

Related news

error: Content is protected !!