





800 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ ಕ್ಷೇತ್ರದದಲ್ಲಿ ಡಿ. 21 ರಿಂದ 25 ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಡಿ. 21, 22 23ರ ವರೆಗೆ ಬ್ರಹ್ಮಕಲಶದ ಕಾರ್ಯಕ್ರಮಗಳು ನಡೆಯಲಿವೆ. ಹಾಗೂ ಡಿ. 24 ಮತ್ತು ಡಿ. 25 ರಂದು ಸಪರಿವಾರ ದೈವಗಳ ನೇಮೋತ್ಸವದ ಬಗ್ಗೆ ವಿಟ್ಲ ಪಂಚಮಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.


ಸೆಪ್ಟೆಂಬರ್ 8 ರ ಬೆಳಗ್ಗೆ ಶ್ರೀ ಜಯದುರ್ಗೆ ಸನ್ನಿಧಿಗೆ ಹಾಗೂ ಶ್ರೀ ಮಹಾಗಣಪತಿಗೆ ಆಮಂತ್ರಣ ಪತ್ರಿಕೆಯನ್ನು ಸಮರ್ಪಿಸಿ ಬಳಿಕ ಇಡ್ಕಿದು ಸೇವಾ ಸಹಕಾರಿ ಸಂಘದಲ್ಲಿ ಕಾರ್ಯಕ್ರಮದ ಕಾರ್ಯಾಲಯದ ಉದ್ಘಾಟನೆ ನಡೆಯಲಿದೆ. ಅದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಸಂಬಂಧ ಪಟ್ಟ ಸಾಮಾಜಿಕ ಜಾಲತಾಣ ಖಾತೆಯ ಪ್ರಾರಂಭಕ್ಕೆ ಚಾಲನೆ ನೀಡಲಾಗುವುದು.
ಸೆಪ್ಟೆಂಬರ್ 8 ರ ರಾತ್ರಿ ದರ್ಮನಗರದಲ್ಲಿ ನಡೆಯುವ ಮಹಾಗಣೇಶೋತ್ಸವದಲ್ಲಿ ವೇ| ಮೂ ಗೋಪಾಲಕೃಷ್ಣ ಭಟ್ ಇವರ ದಿವ್ಯ ಹಸ್ತದಲ್ಲಿ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಕ್ಷೇತ್ರದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಮತ್ತು ರಶೀದಿ ಪುಸ್ತಕ ಬಿಡುಗಡೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಸತೀಶ ಶೆಟ್ಟಿ ಮುಡೈಮಾರು, ಸ್ವಾಗತ ಸಮಿತಿ ಅಧ್ಯಕ್ಷರಾದ ವಸಂತ ಕುಮಾರ್ ಅಮೈ, ಸ್ವಾಗತ ಸಮಿತಿ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನ ಮಜಲು ಉಪಸ್ಥಿತರಿದ್ದರು.