(ಮಾ.30) ಗೀತ್ ಸಂಗೀತ್ ಉಪ್ಪಳ ಸಾದರಪಡಿಸುವ ಭಕ್ತಿಗಾನ ವೈಭವ


ಮೊಗರ್ನಾಡು ಸಾವಿರ ಸೀಮೆಯ ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ಅಮ್ಮನವರ ಮತ್ತು ಅಜ್ವರ ದೈವಂಗಳ ವರ್ಷಾವಧಿ ಜಾತ್ರೆ ಮಾ. 27 ನೇ ಗುರುವಾರದಿಂದ ಮಾ. 31 ನೇ ಸೋಮವಾರದವರೆಗೆ ನಡೆಯಲಿದೆ.
ಮಾ. 27 ಗುರುವಾರದಂದು ಬೆಳಗ್ಗೆ 10 ಗಂಟೆಗೆ ನಡು ಚೆಂಡು, ಸಂಜೆ 4.30 ಕ್ಕೆ ಕುರ್ಮಾನು ಭಂಡಾರದ ಮನೆಯಿಂದ ಶ್ರೀ ಪಂಜುರ್ಲಿ ದೈವದ ಭಂಡಾರ ಆಗಮನವಾಗಲಿದೆ.
ಸಂಜೆ 5 ಗಂಟೆಗೆ ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ಅಮ್ಮನವರ ಮತ್ತು ಅಜ್ವರ ದೈವಂಗಳ ಭಂಡಾರದ ಮನೆಯಿಂದ ಮಲರಾಯ ಮಾಡಕ್ಕೆ ಕಿರುವಾಳು ಹೊರಡುವುದು.
ರಾತ್ರಿ 8 ಗಂಟೆಗೆ ಧ್ವಜಾರೋಹಣದೊಂದಿಗೆ ಮಲರಾಯ ಮಾಡದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ನೇಮ ಮತ್ತು ಅಜ್ವರ ದೈವಂಗಳ ನೇಮೋತ್ಸವ ನಡೆಯಲಿದೆ.
ಮಾ.28 ರಂದು ಬೆಳಗ್ಗೆ ಮುಲಾರು ಮಾಡದಿಂದ ಕಿರುವಾಳು ಕಾಂಪ್ರಬೈಲಿಗೆ ಹೊರಡುವುದು. ಸಂಜೆ 5 ಗಂಟೆಗೆ ಕಡೇ ಚೆಂಡು. ರಾತ್ರಿ 8.30 ಕ್ಕೆ ಕಾಫ್ರಬೈಲಿನಲ್ಲಿ ವಲಸರಿ ನೇಮ ನಡೆಯಲಿದೆ.
ಮಾ. 29 ನೇ ಶನಿವಾರದಂದು ರಾತ್ರಿ 8 ಗಂಟೆಗೆ ಕೆರೆ ಶುದ್ಧ ಮತ್ತು ದೈವಗಳ ಕೆರೆ ನೇಮೋತ್ಸವ ನಡೆಯಲಿದೆ.
ಮಾ. 30 ನೇ ಆದಿತ್ಯವಾರ ಪರಿವಾರ ದೈವಗಳ ನೇಮೋತ್ಸವ, ರಾತ್ರಿ 7.30 ಕ್ಕೆ ಹೂವಿನ ಪೂಜೆ, ಮತ್ತು ಇತರೆ ಸೇವೆಗಳು, ಕೆರೆ ಶುದ್ಧ ರಾತ್ರಿ 10.00 ಗೆ ಉಳ್ಳಾಲ್ತಿ ಅಮ್ಮನವರ ಕೆರೆ ನೇಮೋತ್ಸವ ನಡೆಯಲಿದೆ. ರಾತ್ರಿ 8 ರಿಂದ ಗೀತ್ ಸಂಗೀತ್ ಉಪ್ಪಳ ಸಾದರಪಡಿಸುವ ರಂಜಿತ್ ಬಾಬಾ ಕೋಡಿಬೈಲ್ ಮತ್ತು ಬಳಗದವರಿಂದ ಭಕ್ತಿಗಾನ ವೈಭವ ನಡೆಯಲಿದೆ.
ಮಾ.31 ನೇ ಸೋಮವಾರ ಬೆಳಗ್ಗೆ ಧ್ವಜಾವರೋಹಣವಾಗಿ ಕಾಂಪ್ರಬೈಲು ಭಂಡಾರದ ಮನೆಗೆ ಕಿರುವಾಳು ನಿರ್ಗಮನವಾಗುವುದು.