Sunday, June 7, 2026
spot_imgspot_img
spot_imgspot_img

ಕಾನತ್ತಡ್ಕ ಖಿಳ್ರಿಯ ಜುಮಾ ಮಸ್ಜಿದ್ ನಲ್ಲಿ ಆನ್ ಲೈನ್ ವಂಚನೆ ಬಗ್ಗೆ ಜಾಗೃತಿ !

- Advertisement -
- Advertisement -

ವಿಟ್ಲ: ಕಾನತ್ತಡ್ಕ ಖಿಳ್ರಿಯ ಜುಮಾ ಮಸ್ಜಿದ್ ನಲ್ಲಿ ಆನ್ ಲೈನ್ ವಂಚನೆ ಬಗ್ಗೆ ಜಾಗೃತಿ ಕಾರ್ಯಾಗಾರ ನಡೆಯಿತು.

ವಿಟ್ಲ ಪೊಲೀಸ್ ಠಾಣೆಯ ಎಸೈ ವಿನೋದ್ ಕುಮಾರ್ ರೆಡ್ಡಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಮತ್ತು ಆನ್ ಲೈನ್ ನಲ್ಲಿ ವಂಚನೆ ಮಾಡುವ ಜಾಲ ಸಕ್ರಿಯವಾಗಿದ್ದು, ಜನರು ಜಾಗೃತರಾಗಬೇಕು ಎಂದು ಹೇಳಿದರು.

ಇದೇ ಸಂದರ್ಭ ಮಸೀದಿ ವತಿಯಿಂದ ಇತ್ತೀಚೆಗೆ ಕಾನತ್ತಡ್ಕದಲ್ಲಿ ನಡೆದ ಪ್ರಕರಣವನ್ನು ತಕ್ಷಣವೇ ಭೇದಿಸಿದ ಎಸೈ ವಿನೋದ್ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಸೀದಿ ಅಧ್ಯಕ್ಷ ಆದಂ ಕುಂಞ, ಖತೀಬು ಹಸನ್ ಅಹ್ಸನಿ ಉಪ್ಪಳ, ಯೂಸುಪ್ ಹಾಜಿ ಮುಸ್ಲಿಯಾರ್, ಸದರ್ ಶರೀಫ್ ಮುಸ್ಲಿಯಾರ್ ಪೇರಾಳ, ಪೊಲೀಸ್ ಠಾಣಾ ಸಿಬ್ಬಂದಿ ಪ್ರತಾಪ್ ರೆಡ್ಡಿ ಉಪಸ್ಥಿತರಿದ್ದರು‌. ಮೊಹಮ್ಮದ್ ಹಾರೀಸ್ ಕಾನತ್ತಡ್ಕ ಕೆ.ಎಂ ಸ್ವಾಗತಿಸಿದರು. ಅನಸ್ ಕೆ.ಎಂ ವಂದಿಸಿದರು.

- Advertisement -

Related news

error: Content is protected !!