Wednesday, July 29, 2026
spot_imgspot_img
spot_imgspot_img

ವಿಟ್ಲ ಜೇಸಿ ಶಾಲೆ :ಕನ್ನಡ ರಾಜ್ಯೋತ್ಸವ.

- Advertisement -
- Advertisement -

ವಿಠಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.


ಮುಖ್ಯಅತಿಥಿಯಾಗಿದ್ದ ಕುಮಾರಸ್ವಾಮಿ ವಿದ್ಯಾಲಯ, ಸುಬ್ರಮಣ್ಯದ ಶಿಕ್ಷಕಿಯಾದ ಶ್ರೀಮತಿ ವನಿತಾ ಉದಯಕುಮಾರ್ ಸಮಾರಂಭದಲ್ಲಿ ಪಾಲ್ಗೊಂಡು ಜನಪ್ರಿಯ ಕನ್ನಡ ಗೀತೆಯನ್ನು ಜೇಸಿ ಶಾಲಾ ಕನ್ನಡ ಶಿಕ್ಷಕಿ ಶ್ರೀಮತಿ ಕವಿತಾ ಗೌಡ ಜೊತೆ ಸೇರಿ ಹಾಡಿದರು.

ದೈಹಿಕ ಶಿಕ್ಷಕರಾದ ಭಾನುಪ್ರಕಾಶ್ ಕನ್ನಡ ನುಡಿ, ಕನ್ನಡ ಸಂಸ್ಕೃತಿ ಹಾಗೂ ಕನ್ನಡಿಗರ ಸಾಧನೆಯ ಕುರಿತು ಸಂಧರ್ಬೋಚಿತವಾಗಿ ಮಾತನಾಡಿದರು.

ಕನ್ನಡ ಮಾತೆ ಭುವನೇಶ್ವರಿಯ ಭಾವಚಿತ್ರಕ್ಕೆ ಶಾಲೆಯ ಶಿಕ್ಷಕರು ಪುಷ್ಪನಮನ ಸಲ್ಲಿಸಿದರು.ಸಂಸ್ಥೆಯ ಆಡಳಿತಾಧಿಕಾರಿಯಾದ ಶ್ರೀ ರಾಧಾಕೃಷ್ಣ, ಪ್ರಾಂಶುಪಾಲರಾದ ಶ್ರೀ ಜಯರಾಮ ರೈ, ಉಪಪ್ರಾಂಶುಪಾಲೆಯರಾದ ಶ್ರೀಮತಿ ಜ್ಯೋತಿ ಶೆಣೈ, ಶ್ರೀಮತಿ ಹೇಮಲತಾ ಉಪಸ್ಥಿತರಿದ್ದರು.

ಶ್ರೀಮತಿ ಜ್ಯೋತಿ ಶೆಣೈ ಹಾಗೂ ಕನ್ನಡ ಶಿಕ್ಷಕಿ ಶ್ರೀಮತಿ ಕವಿತಾ ಗೌಡ ಸೇರಿ ಕಾರ್ಯಕ್ರಮ ಸಂಯೋಜಿಸಿದರು.

- Advertisement -

Related news

error: Content is protected !!