Monday, June 15, 2026
spot_imgspot_img
spot_imgspot_img

ʻಕಾಂತಾರ ಚಾಪ್ಟರ್-1ʼ ಶೂಟಿಂಗ್‌ ವೇಳೆ ಮತ್ತೊಂದು ಅವಘಡ – ರಿಷಬ್‌ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

- Advertisement -
- Advertisement -

ಶಿವಮೊಗ್ಗ: ಕಾಂತಾರ ಚಾಪ್ಟರ್-1 ಚಿತ್ರೀಕರಣದ ವೇಳೆಮತ್ತೊಂದು ಅವಘಡ ಸಂಭವಿಸಿದೆ. ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಶೂಟಿಂಗ್ ದೋಣಿಯೇ ಮುಗಿಚಿಹೋಗಿದೆ. ಕ್ಯಾಮೆರಾಮೆನ್, ನಟ ರಿಷಬ್ ಶೆಟ್ಟಿ ಸೇರಿದಂತೆ 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ದೋಣಿ ಮಗುಚಿದ ಬಳಿಕ ಕಲಾವಿದರು ಹಾಗೂ ತಂತ್ರಜ್ಞರು ಈಜುತ್ತಲೇ ದಡ ಸೇರಿಕೊಂಡಿದ್ದಾರೆ. ಕಳೆದ ವಾರ ವಿಜು ವಿ.ಕೆ. ನಿಧನದ ಬಳಿಕ ಸಿನಿಮಾದ ಕೊನೆಯ ಹಂತದ ಶೂಟಿಂಗ್ ಮುಂದುವರಿದ್ದು, ಮಾಣಿ ಜಲಾಶಯದ ಬಳಿ 15 ದಿನಗಳ ಕಾಲ ಶೂಟಿಂಗ್ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ, ಈಗ ಕ್ಯಾಮೆರಾ ಸೇರಿದಂತೆ ಬೋಟ್ ನಲ್ಲಿದ್ದ ಎಲ್ಲಾ ಪ್ರಾಪರ್ಟೀಸ್ ನೀರು ಪಾಲಾಗಿದೆ.

- Advertisement -

Related news

error: Content is protected !!