Monday, April 29, 2024
spot_imgspot_img
spot_imgspot_img

ಕನ್ಯಾನ: ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ

- Advertisement -G L Acharya panikkar
- Advertisement -

ಕನ್ಯಾನ: ಪರಿಶ್ರಮ ಮತ್ತು ಪ್ರಾಮಾಣಿಕತೆ ಸೇರಿಕೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಯಾವತ್ತೂಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸೋಲು ಗೆಲುವು ಸಾಮಾನ್ಯ. ಜಗತ್ತು ಧರ್ಮದ ಆಧಾರದ ಮೇಲೆ ನಿಂತಿದೆ. ಆಹಾರವೇ ಔಷಧಿಯಾದಾಗ ಬದುಕು ಸಾರ್ಥಕ. ಸಂಸ್ಕಾರವನ್ನು ಬೆಳೆಸುವಂತ ಜೀವನವನ್ನು ಅಳವಡಿಸಿಕೊಳ್ಳಬೇಕು, ಏನೇ ಆದರೂ ನಮ್ಮತನವನ್ನು ಬಿಡಬಾರದು, ನಾವು ಮಾನವೀಯ ಮೌಲ್ಯದ ಕೊಂಡಿಗಳಾಗಬೇಕು,ಎಂದು ಒಡಿಯೂರು ಶ್ರೀ ಗುರುದೇವ ಐ.ಟಿ.ಐ ಕನ್ಯಾನದ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನಗೈದರು.

ಅತಿಥಿಗಳಾಗಿ ಭಾಗವಹಿಸಿದ ಸರಕಾರಿ ಪ್ರೌಢಶಾಲೆ ಕೇಪು, ಕಲ್ಲಂಗಳ ಇದರ ಮುಖ್ಯ ಶಿಕ್ಷಕಿ ಮಾಲತಿ ದಿನೇಶ್‌ ಮಾತನಾಡಿ, ಇದೊಂದು ಭಾವನಾತ್ಮಕ ಕಾರ್ಯಕ್ರಮ. ಕಳೆದು ಹೋದ ಸಮಯ ಸಂಪಾದಿಸಲು ಪಡೆಯಲು ಸಾಧ್ಯವಿಲ್ಲ, ಸಮಯದ ಸದುಪಯೋಗ ಪಡೆದುಕೊಂಡಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ, ವಿದ್ಯಾರ್ಥಿಗಳು ಉತ್ತಮ ಕೇಳುಗರಾಗಿರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಇದರ ಪ್ರಭಾರ ಪ್ರಾಂಶುಪಾಲ ಹರೀಶ್‌ ಮಾತನಾಡಿ ಸಂಸ್ಥೆಯಲ್ಲಿ ಸಿಗುವಂತಹ ಉತ್ತಮ ಸವಲತ್ತುಗಳನ್ನು ಪಡೆದು ಭವಿಷ್ಯ ಉಜ್ವಲವಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.

ಒಡಿಯೂರು ಶ್ರೀ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಕನ್ಯಾನ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ, ಹಿರಿಯ ಪತ್ರಕರ್ತರು ಹಾಗೂ ಒಡಿಯೂರು ಸಂಸ್ಥಾನದ ಕಛೇರಿ ಕಾರ್ಯನಿರ್ವಾಹಕ ಯಶವಂತ ವಿಟ್ಲ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಚಾರ್ಯ ಪವೀಣ್‌ ಕುಮಾರ್‌ಎನ್. ಪ್ರಾಸ್ತವಿಸಿ, ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಶಿವಪ್ರಸಾದ್‌ ವಂದಿಸಿದರು. ಸಂಪ್ರೀತ್‌ ಕಾರ್ಯಕ್ರಮ ನಿರೂಪಿಸಿದರು.

Insta: glacharyajewellers
Fb: glacharya
- Advertisement -

Related news

error: Content is protected !!