Thursday, May 2, 2024
spot_imgspot_img
spot_imgspot_img

ಕಾಪು: ಕಾರ್ಯಕರ್ತರ ನಿರಾಶಕ್ತಿ; ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಜಯಪ್ರಕಾಶ್ ಹೆಗ್ಡೆ

- Advertisement -G L Acharya panikkar
- Advertisement -

ಕಾಪು: ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಕಾರ್ಯಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರ ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆಯವರ ಚುನಾವಣಾ ಪ್ರಚಾರದಲ್ಲಿ ಮುಖಂಡರ ನಿರಾಸಕ್ತಿಯಿಂದ ಪ್ರತಿಬೂತಿನಲ್ಲಿ ಕಾರ್ಯಕರ್ತರೇ ಇಲ್ಲದೆ ಸಭೆಗಳು ಮೊಟಕುಕೊಂಡ ಘಟನೆ ನಡೆದಿದೆ.

ಮಂಗಳವಾರ ಕಟಪಾಡಿ, ಕಾಪು, ಶಿರ್ವ, ಪಡುಬಿದ್ರೆ ಮೂಡುಬೆಳ್ಳೆ ಸಹಿತ ಹಲವು ಕಡೆಗಳಲ್ಲಿ ಕಾರ್ಯಕರ್ತರ ಭೇಟಿ, ಮನೆಮನೆಗೆ ಮತದಾರರ ಭೇಟಿ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಎಲ್ಲಾ ವಾರ್ಡ್‌ ಗಳಲ್ಲಿ ಸ್ಥಳೀಯ ಕಾರ್ಯಕರ್ತರೆ ಇಲ್ಲದ ಕಾರಣ ಬೇಸರಗೊಂಡ ಅಭ್ಯರ್ಥಿ ಹೆಗ್ಡೆ ಅವರು ನೇರವಾಗಿ ಕಾಂಗ್ರೆಸ್ ಕಚೇರಿಗೆ ಬಂದಿದ್ದರು.

ಕಾಪುವಿನ ಸ್ಥಳೀಯ ನಾಯಕರ ವರ್ತನೆಯಿಂದ ಅಸಮಾಧಾನಗೊಂಡ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ನೇರವಾಗಿ ದೆಹಲಿಯ ಹೈಕಮಾಂಡ್‌ಗೆ ದೂರಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಹೈಕಮಾಂಡ್‌ನ ಹಿರಿಯ ನಾಯಕ ರಣದೀಪ್ ಸುರ್ಜೆವಾಲ ಮತ್ತು ಕೆ.ಸಿ. ವೇಣುಗೋಪಾಲ್ ಅವರು ತಕ್ಷಣವೇ ಸ್ಪಂದಿಸಿ ನೂತನ ಪ್ರಚಾರ ಸಮಿತಿಯ ಕಾರ್ಯಧ್ಯಕ್ಷ ವಿನಯ್ ಕುಮಾರ್ ಸೊರಕೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೈಕಮಾಂಡ್ ತರಾಟೆಗೆ ತೆಗೆದುಕೊಂಡಂತೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ದೌಡಾಯಿಸಿದ ಸೊರಕೆ ಕಾಪು ಕ್ಷೇತ್ರದ ಸ್ಥಳೀಯ ನಾಯಕರ ಸಭೆ ಕರೆದು ಸಂಘಟಿತ ಹೊರಟದ ಬಗ್ಗೆ ರೂಪುರೇಷೆಗಳನ್ನು ಮಾಡಿ, ತಾನೂ ಸಂಪೂರ್ಣವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದಾಗಿ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!