Friday, April 19, 2024
spot_imgspot_img
spot_imgspot_img

*ಭಾರತ ಕಬಡ್ಡಿ ತಂಡದಲ್ಲಿ ಪ್ರತಾಪ ಮೆರೆಯಲು ಸಜ್ಜಾಗುತ್ತಿರುವ ಸಚಿನ್*

- Advertisement -G L Acharya panikkar
- Advertisement -

ಸಾಧಿಸಬೇಕೆಂಬ ಹಂಬಲದಲ್ಲಿ ಕಠಿಣ ಶ್ರಮವಹಿಸಿ ತನ್ನೆಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ತನ್ನ ಗುರಿಯತ್ತ ಚಿತ್ತನೆಟ್ಟು ಕನಸಿನ ಅರಮನೆಗೆ ನನಸಿನ ಬೀಗಜಡಿಯುವ ಆಸೆಯಿಂದಿದ್ದ ನಮ್ಮ ಉದಯೋನ್ಮುಖ ಕಬಡ್ಡಿ ಆಟಗಾರನ ಎಸ್. ಡಿ. ಎಂ ಉಜಿರೆ ತಂಡದ ಬಲಿಷ್ಠ ಆಟಗಾರ ಸಚಿನ್ ಪ್ರತಾಪ್ ಗೆ ದೊರೆತ ಅವಕಾಶವೂ ಕಣ್ಮರೆ ಯಾಗಿತ್ತು.ಆದರೆ ಇದೀಗ ಕಬಡ್ಡಿ ಅಭಿಮಾನಿಗಳ ಹಾರೈಕೆ ಸುಳ್ಯ ತಾಲೂಕಿನ ಹೆಮ್ಮೆಯ ರಾಜಕಾರಣಿ,ಕೇಂದ್ರ ಸಚಿವ ಡಿ. ವಿ ಸದಾನಂದ ಗೌಡರ ಮುತುವರ್ಜಿಯಿಂದ ಮತ್ತೆ ಅವಕಾಶ ಕೈ ಸೇರಿದೆ.ತರಬೇತಿ ಶಿಬಿರಕ್ಕೆ ಆಹ್ವಾನಿಸಿದೆ ತಡೆ ಒಡ್ಡಿರುವ ಮಾಹಿತಿ ಪಡೆದ ಮಾನ್ಯ ಮಂತ್ರಿಗಳು ಕಬಡ್ಡಿ ಅಸೋಸಿಯೇಷನ್ ನ ಸಿಇಒ ಜತೆಗೆ ಚರ್ಚಿಸಿದ್ದು, ಇದೀಗ ಸಚಿನ್ ಪ್ರತಾಪ್ ಗೆ ಅವಕಾಶ ಕಲ್ಪಿಸಲು ಕಬಡ್ಡಿ ಅಸೋಸಿಯೇಷನ್ ಅಧಿಕಾರಿಗಳು ಸಮ್ಮತಿಸಿದ್ದಾರೆ.

ತನ್ನ ಕಬಡ್ಡಿ ಪ್ರಾವಿಣ್ಯತೆಯಿಂದ ಕಬಡ್ಡಿ ಅಭಿಮಾನಿಗಳ ಮನಗೆದ್ದಿದ್ದ ಕರಾವಳಿಯ ಹೆಮ್ಮೆಯ ಪ್ರತಿಭೆಗೆ ಕಾರಣಾಂತರಗಳಿಂದ ಕಾತುರತೆಯಿಂದ ಕಾಯುತ್ತಿದ್ದ ಅವಕಾಶ ದೂರವಾಗಿತ್ತು ಆದರೆ ಇದೀಗ ಪ್ರತಿಭೆಗೆ ಸೂಕ್ತ ಅವಕಾಶ ದೊರೆತಿದೆ. ಈ ಬಾರಿಯ ಭಾರತ ಕಬಡ್ಡಿ ತಂಡದ ಸೀನಿಯರ್ ವಿಭಾಗದ ಸಂಭಾವ್ಯ ಆಟಗಾರರನಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದ. ಕರ್ನಾಟಕದ ಏಕೈಕ ಆಟಗಾರ ನಮ್ಮ ಸಚಿನ್.

ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಟಾಪರ್ ಆಗಿ ಆಯ್ಕೆಗೊಂಡ ನಮ್ಮ ಆಟಗಾರನಿಗೆ ಯಾಕೆ ತರಬೇತಿಗೆ ಆಹ್ವಾನವಿಲ್ಲವೆಂಬುದು ನಮ್ಮೆಲ್ಲರಿಗಿದ್ದಂತಹ ಪ್ರಶ್ನೆಗೆ ಉತ್ತರ ದೊರೆತು ಮನಸ್ಸು ಮುಂದೊಂದು ದಿನ ಸಚಿನ್ ಪ್ರತಾಪ್ ನನ್ನು ಭಾರತ ತಂಡದಲ್ಲಿ ಕಾಣಲು ಹವಣಿಸುತ್ತಿದೆ.

ಲೋಕಕ್ಕೆ ಮಾರಕವಾಗಿರುವ ಕೊರೋನಾ ಕಾರಣದಿಂದ ಮುಂದೂಡಿದ್ದ ಪ್ರಥಮ ಅವಧಿಯ ತರಬೇತಿ ಆನ್ ಲೈನ್ ಮುಖಾಂತರ ಕಳೆದ ಹಲವು ದಿನಗಳ ಹಿಂದೆ ಮುಗಿದಿದೆ.ಈ ವಿಚಾರ ಗಮನಕ್ಕೆ ಬಂದು ವಿಚಾರಿಸಿದಾಗ ದಿಲ್ಲಿಯ ಕಬಡ್ಡಿ ಅಸೋಸಿಯೇಷನ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನಮ್ಮ ಪ್ರತಿಭೆಯ ಹೆಸರು ನಾಪತ್ತೆ ಯಾಗಿದೆ. ಅನ್ಯಾಯವಾಗಿ ನಡೆದ ಈ ವಿಚಾರ ಕರಾವಳಿಯ ಪ್ರತಿ ಕಬಡ್ಡಿ ಅಭಿಮಾನಿಗೂ ಬೇಸರ ಉಂಟುಮಾಡಿತ್ತು .ಸಂಬಂಧ ಪಟ್ಟ ನಾಯಕರು ಅಧಿಕಾರಿಗಳು ಹಿರಿಯ ಕ್ರೀಡಾಪಟುಗಳು ಈ ವಿಚಾರವಾಗಿ ಧ್ವನಿಯೆತ್ತಿ ನ್ಯಾಯ ದೊರೆಕಿಸಬೇಕಾಗಿದೆಯೆಂಬ ಕೂಗಿಗೆ ಸೂಕ್ತ ಪ್ರತಿಫಲ ದೊರಕಿರುವುದು ಸಂತೋಷದ ವಿಚಾರ.

ಪ್ರತಿಭೆಯಿದ್ದರೂ ಅವಕಾಶಗಳು ಸಿಗುವುದೇ ದೂರದ ವಿಚಾರವಾಗಿರುವ ಈ ದಿನಗಳಲ್ಲಿ ಸಿಕ್ಕಿದ ಅವಕಾಶ ದೂರವಾಗಿರುವುದು ಖಂಡನೀಯವಾಗಿತ್ತು.ಕೈ ತಪ್ಪಿದ ಅವಕಾಶವನ್ನು ಮತ್ತೆ ನಮ್ಮ ಹಳ್ಳಿಯ ಪ್ರತಿಭಾವಂತ ಆಟಗಾರನಿಗೆ ದೊರಕಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಎಲ್ಲಾ ಕಬಡ್ಡಿ ಅಭಿಮಾನಿಗಳ ಪರವಾಗಿ ಕೃತಜ್ಞತೆಗಳು.

ಮತ್ತೆಂದೂ ಇಂತಹ ಘಟನೆಗಳು ಮರುಕಳಿಸದಿರಲೆಂಬುದು ಪ್ರತಿ ಕಬಡ್ಡಿ ಅಭಿಮಾನಿಗಳ ಆಶಯದೊಂದಿಗೆ ಸಚಿನ್ ಪ್ರತಾಪ್ ಗೆ ಶುಭವಾಗಲೆಂದು ಆಶಿಸುತ್ತಾ

✍? Mùńńä

- Advertisement -

Related news

error: Content is protected !!