Thursday, July 23, 2026
spot_imgspot_img
spot_imgspot_img

ಕಾರಿಂಜೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋ ಕಳ್ಳತನದಲ್ಲಿ ಶಾಮೀಲು ಶಂಕೆ ಆರೋಪ – ದೂರು ದಾಖಲು

- Advertisement -
- Advertisement -

ಬಂಟ್ವಾಳ: ಮಹತೋಭಾರ ಶ್ರೀ ಕಾರಿಂಜೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಗೋ ಕಳ್ಳತನದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಬಂಟ್ವಾಳ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?

ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮಹತೋಭಾರ ಶ್ರೀ ಕಾರಿಂಜೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಶಾಂತ್ ನಾಯ್ಕ ಅನ್ನುವ ವ್ಯಕ್ತಿ ತಮ್ಮ ಪರಿಚಯದವರಾದ ಶೇರ್ ಬೆಟ್ಟು ರವಿ ಆಚಾರ್ಯ ಅನ್ನುವವರ ವಿಶ್ವಾಸ ಗಳಿಸಿಕೊಂಡು, ಅವರು ಮನೆಯಲ್ಲಿ ಪ್ರೀತಿಯಿಂದ ಸಾಕಿರುವ ಮೂರು ವರ್ಷ ಪ್ರಾಯದ ಎತ್ತನ್ನು ತನ್ನ ಮನೆಯಲ್ಲಿ ಹಸು ಬಿದೆಗೆ ಬಂದಿದೆ ಒಂದು ಸಲ ನಿಮ್ಮ ಎತ್ತನ್ನು ಕೋಡಿ ಎಂದು ನಂಬಿಸಿ ಗೋ ಕಳ್ಳರಿಗೆ ಅನಾಧಿಕೃತವಾಗಿ ಮಾರಾಟ ಮಾಡಿರುವ ಬಗ್ಗೆ ರವಿ ಆಚಾರ್ಯ ಇವರು ಸಾಮಾಜಿಕ ಹೋರಾಟ ಸಂಘಟನೆಯಾದ ಹಿಂದೂ ಜಾಗರಣ ವೇದಿಕೆಯ ಗಮನಕ್ಕೆ ತಂದು ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಶಾಂತ್ ನಾಯ್ಕ ಅವರು ಅನೇಕ ಕಡೆ ಇಂತಹ ಮೋಸ ಮಾಡಿರುವ ಆರೋಪ ಇರುವ ಕಾರಣ ತಕ್ಷಣ ಸೂಕ್ತ ತನಿಖೆ ನಡೆಸಿ, ಗೋ ಕಳ್ಳತನದ ಜಾಲವನ್ನು ಪತ್ತೆ ಮಾಡದೇ ಹೋದಲ್ಲಿ ಉಗ್ರ ಹೋರಾಟ ನಡೆಸುವ ಬಗ್ಗೆ ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿತ್ತು.

- Advertisement -

Related news

error: Content is protected !!