Sunday, October 6, 2024
spot_imgspot_img
spot_imgspot_img

ಕಾರ್ಕಳ: ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಶರಣು..!

- Advertisement -
- Advertisement -

ಕಾರ್ಕಳ: ವಿಷ ಪದಾರ್ಥ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರೆಂಜಾಳದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ ಗಣೇಶ್‌ (26) ಎಂದು ಗುರುತಿಸಲಾಗಿದೆ.

ಯಾವುದೋ ಕಾರಣಕ್ಕೆ ಮನನೊಂದು ಶನಿವಾರ ರೆಂಜಾಳ ಗ್ರಾಮದ ಸರಕಾರಿ ಶಾಲೆಯ ಬಳಿ ಇರುವ ಕಲ್ಕದಬೆಟ್ಟು ಹಾಡಿಯಲ್ಲಿ ವಿಷ ಪದಾರ್ಥ ಸೇವಿಸಿದ್ದು, ಬಳಿಕ ಚಿಕಿತ್ಸೆಗಾಗಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅದಾಗಲೇ ಗಣೇಶ್ ಮೃತಪಟ್ಟಿರುತ್ತಾರೆ. ಮರದ ಕೆಲಸ ಮಾಡಿಕೊಂಡಿದ್ದ ಗಣೇಶ್ ಅವರಿಗೆ ಎರಡು ತಿಂಗಳ ಹಿಂದೆ ಜಾಂಡೀಸ್ ಬಾಧಿಸಿತ್ತು ಎಂದು ತಿಳಿದುಬಂದಿದೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

- Advertisement -

Related news

error: Content is protected !!