Monday, June 8, 2026
spot_imgspot_img
spot_imgspot_img

ಕಾರ್ಕಳ: ಸ್ನೇಹಿತರ ಬಳಿ ‘ಹೂವು ಬಟ್ಟೆ ತನ್ನಿ’ ಎಂದು ಹೇಳಿ ಆತ್ಮಹತ್ಯೆಗೆ ಶರಣಾದ ಬಸ್ಸು ಚಾಲಕ

- Advertisement -
- Advertisement -

ಕಾರ್ಕಳ: ಸ್ನೇಹಿತರ ಬಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಬಸ್ ಚಾಲಕ ಜು. 13 ರ ಮಧ್ಯಾಹ್ನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಿಯ್ಯಾರು ಗ್ರಾಮದ ಕುಂಟಿಬೈಲು ಎಂಬಲ್ಲಿ ನಡೆದಿದೆ. ಮಿಯ್ಯಾರ್ ನಿವಾಸಿ, ಖಾಸಗಿ ಬಸ್ಸು ಚಾಲಕ ಹರೀಶ್ ಶೆಟ್ಟಿ (50) ಆತ್ಮಹತ್ಯೆ ಶರಣಾದವರು.

ಖಾಸಗಿ ಬಸ್ ಒಂದರಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಹರೀಶ್ ಶೆಟ್ಟಿ ರಿಕ್ಷಾ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಗಂಡ ಹೆಂಡತಿ ಮಧ್ಯೆ ಜಗಳವಾಗಿದ್ದು, ಹೆಂಡತಿ ತವರು ಮನೆಗೆ ಹೋಗಿದ್ದರು. ಇದರಿಂದ ಹರೀಶ್ ಶೆಟ್ಟಿನೊಂದಿದ್ದರು ಎನ್ನಲಾಗಿದೆ.

ಹರೀಶ್‌ ಶೆಟ್ಟಿ ಎರಡು ತಿಂಗಳ ಹಿಂದೆ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಪತ್ನಿ ನೇಣು ತುಂಡರಿಸಿ ಬದುಕಿಸಿದ್ದರು. ಸ್ನೇಹಜೀವಿ ಯಾಗಿದ್ದ ಹರೀಶ್ ಶೆಟ್ಟಿ ಜು. 13 ರ ಬೆಳಿಗ್ಗೆ ಬಜಗೋಳಿ ರಿಕ್ಷಾ ನಿಲ್ದಾಣದಲ್ಲಿ ಬಂದು ಸ್ನೇಹಿತರಲ್ಲಿ ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಬರುವಾಗ ಖಾಲಿ ಕೈ ಬೀಸಿಕೊಂಡು ಬರಬೇಡಿ. ‘ಹೂವು ಬಟ್ಟೆ ತನ್ನಿ’ ಎಂದಿದ್ದರು. ಹರೀಶ್ ಶೆಟ್ಟಿ ಕುಡಿದು ಮಾತನಾಡುತ್ತಿದ್ದಾರೆ ಎಂದೇ ಅಂದುಕೊಂಡಿದ್ದ ಸ್ನೇಹಿತರಿಗೆ ಮಧ್ಯಾಹ್ನ ವಿಷಯ ತಿಳಿದು ಅಘಾತವಾಗಿದೆ. ಮಧ್ಯಾಹ್ನ ಹರೀಶ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಪೊಲೀಸರು ಸ್ಥಳಕ್ಕಾಗಮಿಸಿ ಪರೀಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!