Sunday, June 29, 2025
spot_imgspot_img
spot_imgspot_img

ಕಾರ್ಕಳ: ಓವರ್ ಟೇಕ್ ಭರದಲ್ಲಿ ಕಾರು ಪಲ್ಟಿ..!

- Advertisement -
- Advertisement -

ಕಾರ್ಕಳ: ಓವರ್ ಟೇಕ್ ಭರದಲ್ಲಿ ಕಾರೊಂದು ರಸ್ತೆ ವಿಭಜಕದ ಮೇಲೆ ಪಲ್ಟಿ ಹೊಡೆದ ಘಟನೆ ಕಾರ್ಕಳ- ಹೆಬ್ರಿ ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿ ಮುನಿಯಾಲು ಎಂಬಲ್ಲಿ ನಡೆದಿದೆ.

ಕಾರ್ಕಳ ಕಡೆಯಿಂದ ಹೆಬ್ರಿಗೆ ಹೋಗುವ ರಾಜ್ಯ ಹೆದ್ದಾರಿ ಮುನಿಯಾಲಿನ ಚತುಷ್ಪಥ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.

ಯುವಕರ ಕೂಡಿಕೊಂಡು ಹೋಗುತ್ತಿದ್ಧ ಎರಡು ಕಾರುಗಳ ನಡುವೆ ಓವರ್ ಟೇಕ್ ನಡೆದಿದ್ದು, ಇನ್ನೊಂದು ಕಾರಿನ ಚಾಲಕ ಹಿಂಬದಿಯಿಂದ ಬರುತ್ತಿದ್ದ ಕಾರಿಗೆ ಸೈಡ್ ನೀಡದೆ ಇದ್ದುದು ಘಟನೆಗೆ ಕಾರಣವೆನ್ನಲಾಗಿದೆ. ಮುನ್ನುಗ್ಗುವ ಭರದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು ಪಲ್ಟಿ ಹೊಡೆದಿದ್ದು, ಕಾರಿನೊಳಗಿದ್ದವರಿಗೆ ಸಣ್ಣಪುಟ್ಟ ರೀತಿಯಲ್ಲಿ ಗಾಯವಾಗಿದೆ.

ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿ ಘಟನೆ ಕಾರಣವಾಗಿರುವ ಎರಡು ಕಾರುಗಳ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

- Advertisement -

Related news

error: Content is protected !!