Monday, June 8, 2026
spot_imgspot_img
spot_imgspot_img

ಕಾರ್ಕಳ: ಆಕಸ್ಮಿಕವಾಗಿ ಕಾಲು ಜಾರಿ‌ ಬಾವಿಗೆ ಬಿದ್ದು ವೃದ್ಧೆ ಸಾವು

- Advertisement -
- Advertisement -

ಕಾರ್ಕಳ: ವೃದ್ಧೆಯೊಬ್ಬರು ಬೆಳಿಗ್ಗೆ ಎದ್ದು‌ ವಾಕಿಂಗ್ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ನಡೆದಿದೆ.

ಮೃತಪಟ್ಟ ವೃದ್ಧೆಯನ್ನು ಪ್ಲೋರಿನ್ ಮಥಾಯಸ್ (71) ಎಂದು ಗುರುತಿಸಲಾಗಿದೆ.

ಐನಿಷ್ ಮಥಾಯಸ್‌ ಇವರು ಕಾರ್ಕಳ ತಾಲೂಕು ಬೆಳ್ಮಣ್‌ ಗ್ರಾಮದ ದೇವಸ್ಯ ಕೆಳಗಿನ ಮನೆ ಇಲ್ಲಿ ತಂದೆ – ತಾಯಿ ಹಾಗೂ ಸಂಸಾರದೊಂದಿಗೆ ವಾಸವಾಗಿದ್ದು ಅವರ ತಾಯಿ ಫ್ಲೋರಿನ್‌ ಮಥಾಯಸ್‌ ಇವರು ಕಳೆದ 35 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಫಾದರ್‌ ಮುಲ್ಲಾರ್‌ ಆಸ್ಪತ್ರೆ ಕಂಕನಾಡಿ. ಮಂಗಳೂರು ಇಲ್ಲಿಯ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಫ್ಲೋರಿನ್‌ ಮಥಾಯಸ್‌ ರವರು ಪ್ರತಿದಿನ ಬೆಳಿಗ್ಗೆ 05 :30 ಗಂಟೆಗೆ ಎದ್ದು ಮನೆಯ ಅಂಗಳ ಮತ್ತು ಆಸುಪಾಸಿನಲ್ಲಿ ವಾಕಿಂಗ್‌ ಮಾಡುವ ಅಭ್ಯಾಸವುಳ್ಳವರಾಗಿರುತ್ತಾರೆ, ಎಂದಿನಂತೆ ಬೆಳಿಗ್ಗೆ 05 :30 ಗಂಟೆಗೆ ಎದ್ದು ವಾಕಿಂಗ್‌ ಮಾಡುತ್ತಾ ಮನೆಯ ಸಮೀಪದ ಬಾವಿಯ ಬಳಿಗೆ ಹೋದವರು ಬೆಳಿಗ್ಗೆ ಸುಮಾರು 06 :00 ಗಂಟೆಯಿಂದ 06 :30 ಗಂಟೆಯ ಮಧ್ಯೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿದೆ.

- Advertisement -

Related news

error: Content is protected !!