Saturday, June 28, 2025
spot_imgspot_img
spot_imgspot_img

ಕಾರ್ಕಳ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು..!

- Advertisement -
- Advertisement -

ಕಾರ್ಕಳ: ಮಹಿಳೆಯೋರ್ವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮುಡಾರು ಗ್ರಾಮದ ಬಜಗೋಳಿ ಸಮೀಪದ ಗುರ್ಗಾಲ್‌ಗುಡ್ಡೆ ಎಂಬಲ್ಲಿ ನಡೆದಿದೆ.

ಗುರ್ಗಾಲ್‌ಗುಡ್ಡೆಯ ನಿವಾಸಿ ಪ್ರಭಾ(42) ಎಂಬವರ ಮನೆಯ ಹೊರಗಡೆ ಡಬ್ಬಿಯಲ್ಲಿ ಇರಿಸಿದ ಕೀ ಸಹಾಯದಿಂದ ಒಳಗೆ ನುಗ್ಗಿದ ಕಳ್ಳರು, ಬೆಡ್ ರೂಮ್‌ನ ಕಾಪಾಟಿನಲ್ಲಿದ್ದ ಸುಮಾರು 33 ಪವನ್ ತೂಕದ 10,05,00ರೂ. ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!