Thursday, June 4, 2026
spot_imgspot_img
spot_imgspot_img

ಕಾರ್ಕಳ: ಮಗುವಿನ ಜೊತೆ ತಾಯಿ ನಾಪತ್ತೆ; ಪತ್ತೆಗಾಗಿ ಮನವಿ..!

- Advertisement -
- Advertisement -

ಕಾರ್ಕಳ: ಮಹಿಳೆಯೋರ್ವರು ತನ್ನ ಮಗುವಿನ ಜೊತೆಗೆ ನಾಪತ್ತೆಯಾದ ಘಟನೆ ಈದು ಗ್ರಾಮದ ವರಿಮಾರು ದರ್ಖಾಸು ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ಮಹಿಳೆ ಶಿವಾನಂದ ಎಂಬವರ ಹೆಂಡತಿ ಅಶ್ವಿನಿ ಎಸ್. (28) ಹಾಗೂ ಏಳೂವರೆ ವರ್ಷದ ಮಗು ಎಂದು ಗುರುತಿಸಲಾಗಿದೆ.

ಹೊಸ್ಮಾರು ಅಡಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಶ್ವಿನಿ ಜೂ.11ರಂದು ಮಧ್ಯಾಹ್ನ 2.50ಕ್ಕೆ ಚಿಕ್ಕಮನ ಮಗಳು ರಶ್ಮಿತಾರಲ್ಲಿ ಮಂಗಳೂರಿನಲ್ಲಿರುವ ತಂಗಿ ಮೈನಾಳ ಮಗುವಿಗೆ ಹುಷಾರಿಲ್ಲದೆ ಇದ್ದು ಮಂಗಳೂರಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಕಿರಿಯ ಮಗ ಆಶಿಕ್‌ನನ್ನು ಕರೆದುಕೊಂಡು ಹೋದವರು ತಂಗಿಯ ಮನೆಗೂ ಹೋಗದೆ ವಾಪಸ್ಸು ತನ್ನ ಮನೆಗೂ ಬಾರದೆ ಕಾಣೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದವರ ಮಾಹಿತಿ ಸಿಕ್ಕಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿಯನ್ನು ತಿಳಿಸಬೇಕಾಗಿ ವಿನಂತಿಸಲಾಗಿದೆ.

- Advertisement -

Related news

error: Content is protected !!