


ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಸಕ್ರಿಯವಾಗಿ ನಡೆಯುತ್ತಿರುವ ಗೋ ಕಳ್ಳತನ ಹಾಗೂ ಮತಾಂತರವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ, ಕಾರ್ಕಳ ಪ್ರಖಂಡ “ಬೃಹತ್ ಜನಜಾಗೃತಿ ಸಭೆ”ಯು 19/09/2021ರಂದು ನಿಟ್ಟೆಯ ಲೇಮಿನ ಕ್ರಾಸ್ ಬಳಿ ನಡೆಯಿತು.
ಹಿಂದುತ್ವದ ವಿಜಯ ಪತಾಕೆಯನ್ನು ಹಾರಿಸಿಯೇ ಹಾರಿಸುತ್ತೇವೆ, ಇದು ಕೇವಲ ಪ್ರತಿಭಟನೆಯಲ್ಲ, ಗೋ ಕಳ್ಳರಿಗೆ ಎಚ್ಚರಿಕೆ, ಎಂದು ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್ ಕೆ. ಆರ್ ಹೇಳಿದರು.

ಹಿಂದೂ ಧರ್ಮದ ಅಂತ:ಶಕ್ತಿ ಗೋವು ಮತ್ತು ಗುಡಿ.. ಅಂತ:ಶಕ್ತಿಗೆ ಧಕ್ಕೆಯಾದರೆ ಭಾಗವದ್ವಜ ಹಿಡಿದಿರುವ ಭಜರಂಗಿಗಳ ಕೈಗಳು ತಲವಾರು ಹಿಡಿಯಲೂ ಕೂಡ ಸಿದ್ದ, ಎಂಬುದಾಗಿ ಚೈತ್ರ ಕುಂದಾಪುರ ನುಡಿದರು.
ಸಂಘಶಕ್ತಿ ಕಲಿಯುಗೇ ಎಂಬ ಮಾತಿನಂತೆ ಸಂಘಟನೆಯೊAದೆ ಎಲ್ಲದಕ್ಕೂ ಮೂಲಮಂತ್ರ.. ಸಂಘಟಿತರಾಗೋಣ ಸವಾಲುಗಳನ್ನು ಸಮರ್ಥವಾದ ಉತ್ತರದೊಂದಿಗೆ ಎದುರಿಸೋಣ ಆ ಮುಖೆನವಾಗಿ ಗೋಕಳ್ಳರಿಗೆ ತಕ್ಕ ಶಿಕ್ಷೆ ಕೊಡಲು ನಾವು ಸಿದ್ದರಿದ್ದೇವೆ ಎಂಬುದಾಗಿ ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ತಿಳಿಸಿದರು.

ಈ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ದಕ್ಷಿಣ ಪ್ರಾಂತ ಬಜರಂಗದಳದ ರಾಜ್ಯ ಸಂಚಾಲಕ ಸುನಿಲ್ ಕೆ. ಆರ್, ವಿಶ್ವ ಹಿಂದೂ ಪರಿಷತ್, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಚೈತ್ರ ಕುಂದಾಪುರ, ಕಾರ್ಕಳ ಪ್ರಖಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪಾಧ್ಯಕ್ಷ ಜಗದೀಶ್ ಸಾಣೂರ್, ಕಾರ್ಕಳ ಪ್ರಖಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪಾಧ್ಯಕ್ಷ ಅಶೋಕ್ ಕುಮಾರ್ ಜೈನ್, ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು.










