- Advertisement -





- Advertisement -
ಕಾರ್ಕಳ: ನಗದು ಮತ್ತು ಇತರೆ ವಸ್ತುಗಳಿರುವ ಒಂದು ಬ್ಯಾಗ್ ಕಾರ್ಕಳದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿ ದೊರೆತಿದ್ದು, ಅದನ್ನು ಬಂಗ್ಲೆಗುಡ್ಡೆ ನಿವಾಸಿಗಳಾದ ಇಬ್ರಾಹಿಂ ಸಾಹೇಬ್ ಮತ್ತು ಹರ್ಷದ್ ಎಂಬವರು ಪೊಲೀಸ್ ಸ್ಟೇಷನ್ ಗೆ ತಂದೊಪ್ಪಿಸಿದ್ದಾರೆ.
ಬಳಿಕ ವಿಳಾಸ ಪತ್ತೆ ಮಾಡಿ ಸಂದೇಶ್ ಶೆಟ್ಟಿ ಶಿವಪುರ ಅವರಿಗೆ ಬ್ಯಾಗ್ ನ್ನು ನೀಡಲಾಯಿತು. ದಾರಿ ಮಧ್ಯೆ ದೊರೆತ ಬ್ಯಾಗ್ ನ್ನು ಪೊಲೀಸ್ ಸ್ಟೇಷನ್ ಗೆ ನೀಡಿ ಪ್ರಾಮಾಣಿಕತೆ ಮೆರೆದ ಬಂಗ್ಲೆಗುಡ್ಡೆ ನಿವಾಸಿಗಳಾದ ಇಬ್ರಾಹಿಂ ಸಾಹೇಬ್ ಮತ್ತು ಹರ್ಷದ್ ರವರಿಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಪರವಾಗಿ ಧನ್ಯವಾದ ತಿಳಿಸಿದ್ದಾರೆ.
- Advertisement -