Monday, April 29, 2024
spot_imgspot_img
spot_imgspot_img

ಕರ್ನಾಟಕ ವಿಧಾನಸಭಾ ಚುನಾವಣೆ: ಪುತ್ತೂರು 80.02%, ಬಂಟ್ವಾಳ 80.17% ಮತ ದಾಖಲು

- Advertisement -G L Acharya panikkar
- Advertisement -

ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10ರಂದು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆದಿದೆ. ದ.ಕ. ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, 75.87% ಮತದಾನವಾಗಿದೆ.

ಪುತ್ತೂರಿನಲ್ಲೂ ಮತದಾನ ಬಿರುಸು ಪಡೆದುಕೊಂಡಿದ್ದು 80.02% ಮತ ಚಲಾವಣೆಯಾಗಿದೆ. ಮತಚಲಾಯಿಸಲು ಹಕ್ಕು ಪಡೆದಿದ್ದ 2,12,753 ಮತದಾರರಲ್ಲಿ 1,70,366 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 1,04,918 ಪುರುಷ ಮತದಾರರ ಪೈಕಿ 84,087 ಮತ್ತು 1,07,832 ಮಹಿಳಾ ಮತದಾರರ ಪೈಕಿ 86,278 ಮಂದಿ ಮತ ಚಲಾಯಿಸಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 80.17% ಮತದಾನವಾಗಿದೆ. ಒಟ್ಟು 2,28,377 ಮತದಾರರ‌ ಪೈಕಿ 1,83,326 ಮಂದಿ ಮತಚಲಾಯಿಸಿದ್ದಾರೆ. ದ.ಕ.ಜಿಲ್ಲೆಯಲ್ಲಿ 83.33 ಶೇ. ಮತದಾನವಾದ ಬೆಳ್ತಂಗಡಿ ಮೊದಲ ಸ್ಥಾನದಲ್ಲಿದ್ದು, ಬಂಟ್ವಾಳ ಕ್ಷೇತ್ರ ಎರಡನೇ ಅತಿ ಹೆಚ್ಚು ಮತದಾನವಾದ ಕ್ಷೇತ್ರವಾಗಿದೆ.

ದ.ಕ. ಜಿಲ್ಲೆಯಲ್ಲಿ 75.87% ಮತದಾನವಾಗಿದೆ. 8,70,991 ಪುರುಷ ಮತ್ತು 9,10,314 ಮಹಿಳೆ ಹಾಗೂ ಇತರ 84 ಸಹಿತ 17,81,389 ಮತದಾರರ ಪೈಕಿ 6,58,761 ಪುರುಷ, 6,92,803 ಮಹಿಳೆ ಹಾಗೂ ಇತರ 18 ಸಹಿತ 13,51,582 ಮಂದಿ ಮತದಾನಗೈದಿದ್ದಾರೆ. 4,29,807 ಮಂದಿ ಮತದಾನದಿಂದ ದೂರ ಉಳಿದಿದ್ದಾರೆ.


- Advertisement -

Related news

error: Content is protected !!