Monday, April 29, 2024
spot_imgspot_img
spot_imgspot_img

ಸಿದ್ದರಾಮಯ್ಯ 14ನೇ ಬಾರಿಗೆ ಬಜೆಟ್‌ ಮಂಡನೆ; ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿವೆ

- Advertisement -G L Acharya panikkar
- Advertisement -

ಸಿಎಂ ಸಿದ್ದರಾಮಯ್ಯ ಅವರು 14ನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ಈ ಬಾರಿಯ ಬಜೆಟ್​ ಜನರಲ್ಲೂ ಬಹಳಷ್ಟು ಕುತೂಹಲ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ 1995-96 ರಲ್ಲಿ ಮೊದಲ ಬಾರಿಗೆ ಬಜೆಟ್‌ ಮಂಡಿಸಿದ್ದರು. ಈ ಬಾರಿಯ ಬಜೆಟ್‌ ಮಂಡನೆಗೂ ಮುನ್ನ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಬಜೆಟ್ ಗಾತ್ರ ಮೂರು ಲಕ್ಷದ 27 ಸಾವಿರ ಕೋಟಿ ರೂಗಳಾಗಿದೆ.

ಆಹಾರ ಇಲಾಖೆಗೆ 10 ಸಾವಿರ ಕೋಟಿ ಅನುದಾನ

100 ರೈತ ಉತ್ಪಾದನಾ ಕಂಪನಿಗಳಿಗೆ ಶೇ 4ರ ಬಡ್ಡಿದರದಲ್ಲಿ ಸಹಾಯಧನ
ಮೈಸೂರು, ಕಲಬುರ್ಗಿಯಲ್ಲಿ ಟ್ರಾಮಾ ಸೆಂಟರ್ ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಘೋಷಣೆ
ನಮ್ಮ ಮೆಟ್ರೊಗೆ 30ಸಾವಿರ ಕೋಟಿ ಅನುದಾನ
ಸಮಾಜ ಕಲ್ಯಾಣ ಇಲಾಖೆಗೆ 11 ಸಾವಿರ ಕೋಟಿ ಅನುದಾನ
ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾಂಡ್‌ಗೆ 10 ಕೋಟಿ ಅನುದಾನ
ಕೃಷಿ ಭಾಗ್ಯ ಯೋಜನೆಯಡಿ ನರೇಗಾ ಯೋಜನೆಗೆ 10 ಕೋಟಿ ಅನುದಾನ
ಇಂದಿರಾ ಕ್ಯಾಂಟೀನ್‌ಗೆ ₹100 ಕೋಟಿ ಅನುದಾನ
ಬೆಂಗಳೂರು ಅಭಿವೃದ್ಧಿಗೆ 45 ಸಾವಿರ ಕೋಟಿ ಅನುದಾನ
ಲೋಕೋಪಯೋಗಿ ಇಲಾಖೆಗೆ 10ಸಾವಿರ ಕೋಟಿ ಅನುದಾನ
ಕೃಷಿ ಭಾಗ್ಯ ಯೋಜನೆಗೆ ಮನರೇಗ ಅಡಿಯಲ್ಲಿ ₹ 100 ಕೋಟಿ
ಅನುಗ್ರಹ ಯೋಜನೆ ಮರುಜಾರಿ: ಹಸು, ಎಮ್ಮೆ, ಎತ್ತು ಸತ್ತರೆ ₹ 10,000 ಪರಿಹಾರ ಧನ
ರೈತರಿಗೆ 3 ಲಕ್ಷದಿಂದ 5 ಲಕ್ಷದವರಗೆ ಶೂನ್ಯ ಬಡ್ಡಿದರದ ಸಾಲ
ಸಮಾಜ ಕಲ್ಯಾಣ ಇಲಾಖೆಗೆ ₹ 11,173 ಕೋಟಿ
ಕಿರು ಆಹಾರ ಸಂಸ್ಕರಣಾ ಉದ್ದಿಮೆಗೆ ₹ 100 ಕೋಟಿ
ಶಿಡ್ಲಘಟ್ಟ ಮತ್ತು ರಾಮನಗರದಲ್ಲಿ ತಲಾ 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ
ಮೇಕೆದಾಟು ಯೋಜನೆಗೆ ಭೂಸ್ವಾಧಿನ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧಾರ
ಎತ್ತಿನ ಹೊಳೆ ಯೋಜನೆಗೆ ಪರಿಷ್ಕೃತ 22,252 ಕೋಟಿ ಮೀಸಲು

ತುಟ್ಟಿ

ಅಬಕಾರಿ ತೆರಿಗೆ ಶೇ.20ರಷ್ಟು ಹೆಚ್ಚಿಸಲಾಗಿದೆ. ಬಿಯರ್ ಮೇಲೆ ಶೇ 10ರಷ್ಟು ತೆರಿಗೆ ಹೆಚ್ಚಳ

ಗ್ಯಾರಂಟಿ ಯೋಜನೆಗಳು ಜಾರಿ

ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ವರ್ಷದಲ್ಲಿ ಸುಮಾರು 52,000 ಕೋಟಿ ರೂ.ಗಳನ್ನು ಅಂದಾಜು 1.30 ಕೋಟಿ ಕುಟುಂಬಗಳಿಗೆ ತಲುಪಿಸುವ ಗುರಿ ಹೊಂದಿದ್ದೇವೆ. ಪ್ರತೀ ಕುಟುಂಬಕ್ಕೆ ಮಾಸಿಕ 4,000 ರಿಂದ 5,000 ರೂ.ಗಳಷ್ಟು, ಅಂದರೆ, ವಾರ್ಷಿಕವಾಗಿ ಸರಾಸರಿ 48,000 ದಿಂದ 60,000 ರೂ.ಗಳಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ ಮೂಲ ಆದಾಯ ಎಂಬ ಪರಿಕಲ್ಪನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ.

ಬಡವರ ಕೈಗೆ ಹೆಚ್ಚಿನ ಹಣ ನೀಡುವುದರ ಹಿಂದಿರುವ ಪ್ರಬಲ ಆರ್ಥಿಕ ತರ್ಕವನ್ನು ಸದನದ ಗೌರವಾನ್ವಿತ ಸದಸ್ಯರು ಗಮನಿಸಬಹುದಾಗಿದೆ. ಜಿ.ಎಸ್‌.ಟಿ. ಯ ಬಹುಪಾಲು ಮೊತ್ತವು ಸಮಾಜದ ತಳಹಂತದ ಶೇ.60 ರಷ್ಟು ಜನರಿಂದ ಸಂಗ್ರಹವಾಗುತ್ತಿದ್ದರೂ ಆರ್ಥಿಕ ವ್ಯವಸ್ಥೆಯ ಹೆಚ್ಚಿನ ಲಾಭವು ಸಮಾಜದ ಮೇಲ್ಮಟ್ಟದ ಶೇ.10 ರಷ್ಟು ಜನರಿಗೆ ತಲುಪುತ್ತಿದೆ. ಆದ್ದರಿಂದ ಬಡವರಿಗೆ ಸಂಪತ್ತನ್ನು ಮರುಹಂಚಿಕೆ ಮಾಡುವ ನೀತಿಗಳನ್ನು ಜನಪರ ಸರ್ಕಾರಗಳು ಅನುಸರಿಸಬೇಕು. ನಮ್ಮ ಗ್ಯಾರಂಟಿ ಯೋಜನೆಗಳು ಈ ಕೆಲಸವನ್ನು ಮಾಡುತ್ತವೆ ಎಂದು ಸಿದ್ದರಾಮಯ್ಯ ಹೇಳಿದರು.

ಇಲಾಖಾವಾರು ಬಜೆಟ್ ಹಂಚಿಕೆ ವಿವರ

ಶಿಕ್ಷಣ ಕ್ಷೇತ್ರ- 37 ಸಾವಿರ ಕೋಟಿ ರೂ (ಶೇ 11)
ಮಹಿಳಾ ಮತ್ತು ಮಕ್ಕಳ ಕಲ್ಯಾಣ- 24 ಸಾವಿರ ಕೋಟಿ ರೂ (ಶೇ 7)
ಇಂಧನ- 22 ಸಾವಿರ ಕೋಟಿ ರೂ (ಶೇ 7)
ನೀರಾವರಿ-19 ಸಾವಿರ ಕೋಟಿ ರೂ (ಶೇ 6)
ಗ್ರಾಮೀಣಾಭಿವೃದ್ಧಿ -18ಸಾವಿರ ಕೋಟಿ ರೂ (ಶೇ 5)
ಒಳಾಡಳಿತ ಮತ್ತು ಸಾರಿಗೆ – 16ಸಾವಿರ ಕೋಟಿ (ಶೇ 5)
ಕಂದಾಯ- 16 ಸಾವಿರ ಕೋಟಿ (ಶೇ 5)
ಆರೋಗ್ಯ ಇಲಾಖೆ- 14 ಸಾವಿರ ಕೋಟಿ ರೂ (ಶೇ 4)
ಸಮಾಜ ಕಲ್ಯಾಣ- 11 ಸಾವಿರ ಕೋಟಿ ರೂ (ಶೇ 3)
ಲೋಕೋಪಯೋಗಿ ಇಲಾಖೆ- 10ಸಾವಿರ ಕೋಟಿ ರೂ (ಶೇ 3)
ಕೃಷಿ ಮತ್ತು ತೋಟಗಾರಿಕೆ 5860 ಕೋಟಿ ರೂ (ಶೇ 2)
ಪಶುಸಂಗೋಪನೆ ಮತ್ತು ಮೀನುಗಾರಿಕೆ- 3024ಕೋಟಿ ರೂ (ಶೇ 1)
ಇತರೆ- 1.09ಲಕ್ಷ ಕೋಟಿ (ಶೇ 32)

2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಸ್ವಂತ ತೆರಿಗೆ ವಿವರ
ಒಟ್ಟು ರಾಜಸ್ವ ಸಂಗ್ರಹ- 1.62ಲಕ್ಷ ಕೋಟಿ ರೂ
ವಾಣಿಜ್ಯ ತೆರಿಗೆ- 1ಲಕ್ಷ ಕೋಟಿ ರೂ (ಶೇ 58)
ಅಬಕಾರಿ ತೆರಿಗೆ- 38ಸಾವಿರ ಕೋಟಿ ರೂ (ಶೇ 20)
ನೋಂದಣಿ ಮತ್ತು ಮುದ್ರಾಂಕ 25ಸಾವಿರ ಕೋಟಿ ರೂ (ಶೇ 14)
ಮೋಟಾರು ವಾಹನ 11500 ಕೋಟಿ ರೂ (ಶೇ 7)
ಇತರೆ- 2153 ಕೋಟಿ (ಶೇ 1)

- Advertisement -

Related news

error: Content is protected !!