


ಸುಳ್ಯ: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಇದರ ಸದಸ್ಯತ್ವಕ್ಕೆ ಮಾರ್ಚ್ 11 ರಂದು ರಾಜ್ಯಾದಾದ್ಯಂತ ಚುನಾವಣೆ ನಡೆಯಲಿದ್ದು ಸುಳ್ಯದಿಂದ ನ್ಯಾಯವಾದಿ ಕನ್ನೆಜಾಲು ಜಯಪ್ರಕಾಶ್ ರೈ ಯವರು ಫೆ. 10 ರಂದು ಬೆಂಗಳೂರಿನ ವಕೀಲರ ಪರಿಷತ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿರುತ್ತಾರೆ.
ಮಾರ್ಚ್ 11 ರಂದು ನಡೆಯಲಿರುವ ಚುನಾವಣೆಗೆ ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು ಈಗಾಗಲೇ ಸುಮಾರು 160 ಮಂದಿ ವಕೀಲರು ನಾಮಪತ್ರ ಸಲ್ಲಿಸಿದ್ದು, ಸುಳ್ಯ ವಕೀಲರ ಸಂಘದ ಸದಸ್ಯರ ಪೈಕಿ ಪ್ರಥಮವಾಗಿ ಜಯಪ್ರಕಾಶ್ ರೈ ಕನ್ನಜಾಲು ರವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿದುಬಂದಿದೆ. ಜಿಲ್ಲೆಯಿಂದ ಹಿರಿಯ ನ್ಯಾಯವಾದಿಗಳಾದ ಪಿ.ಪಿ ಹೆಗ್ಡೆ, ಸುಭಾಷ್ ಕೌಡಿಚಾರ್ ಸಂಧ್ಯಾ ಯು. ಪ್ರಭು ರವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.
ಜಯಪ್ರಕಾಶ್ ರೈ ಯವರು ಮೂಲತ: ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕನ್ನೆಜಾಲು ಮನೆತನದವರಾಗಿದ್ದು. ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಳ್ಯ ವಕೀಲರ ಸಂಘದ ಹಿರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕೆ. ವಿ.ಜಿ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿರುತ್ತಾರೆ.









