Saturday, April 27, 2024
spot_imgspot_img
spot_imgspot_img

ವಿಟ್ಲ: ಮಗುವನ್ನು ಕಳೆದುಕೊಂಡ ವೇದನೆ..! ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

- Advertisement -G L Acharya panikkar
- Advertisement -

ವಿಟ್ಲ: ಮಹಿಳೆಯೋರ್ವರು ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರೋಪ್ಪಾಡಿ ಗ್ರಾಮದ ಕಲಾಯಿಗುತ್ತು ಎಂಬಲ್ಲಿ ಘಟನೆ ನಡೆದಿದ್ದು ಪ್ರೀತಿ ಶೆಟ್ಟಿ (37ವ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಮೃತರ ತಂದೆ ನೀಡಿದ ಹೇಳಿಕೆ ಹಿನ್ನಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನ್ನ ಮಗುವನ್ನು ಕಳೆದುಕೊಂಡು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:09-06-2023 ರಂದು ಸಂಜೆ 6:30 ಗಂಟೆಯ ಸುಮಾರಿಗೆ ತೋಟಕ್ಕೆ ಸಿಂಪಡಿಸಲೆಂದು ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಕಲಾಯಿಗುತ್ತು ಎಂಬ ಮನೆಯಲ್ಲಿ ತಂದಿಟ್ಟಿದ್ದ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಮಂಗಳೂರಿನ ಫಾದರ್ ಮುಲ್ಲರ್ಸ್‌ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಹೊರತು ಪ್ರೀತಿ ಶೆಟ್ಟಿರವರ ಮರಣದ ಬಗ್ಗೆ ಬೇರೆ ಯಾವುದೇ ರೀತಿಯ ಸಂಶಯವಿರುವುದಿಲ್ಲ ಎಂದು ತಂದೆ ಸುರೇಶ್ ಚೌಟ ಹೇಳಿದ್ದಾರೆ.

- Advertisement -

Related news

error: Content is protected !!