Friday, March 29, 2024
spot_imgspot_img
spot_imgspot_img

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಅವಮಾನ-ಚುನಾವಣಾ ನೀತಿ ಉಲ್ಲಂಘನೆ ಮರು ಚುನಾವಣೆಗೆ ಅಗ್ರಹ – ಸೇಸಪ್ಪ ಬೆದ್ರಕಾಡು

- Advertisement -G L Acharya panikkar
- Advertisement -

ವಿಟ್ಲ: ಅನಂತಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಪಕ್ಷೇತರ ಅಭ್ಯರ್ಥಿಗಳು ಪರಿಶಿಷ್ಟ ಸಮುದಾಯದ ಕುಟುಂಬವನ್ನು ಅವಮಾನಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಆಗ್ರಹಿಸಿದ್ದಾರೆ.

ಅವರು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅನಂತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ ಸಂಖ್ಯೆ ೧ ಮತ್ತು ೨ರಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಅಭ್ಯರ್ಥಿಗಳು ಚುನಾವಣಾ ಪ್ರಚಾರದ ಪರಿಶಿಷ್ಟ ಜಾತಿಗೆ ಸೇರಿದ ಆನಂದ ಎಂಬವರಿಗೆ ಹೊಸ ಮನೆ ನಿರ್ಮಾಣವಾಗುತ್ತಿದ್ದು, ಈ ಕುಟುಂಬದ ಹಳೆಯ ಮನೆಯ ವೀಡಿಯೋ ಮಾಡಿ ಅದನ್ನು ಎಲ್ಲಿರಿಗೂ ವೈರಲ್ ಮಾಡುವ ಮೂಲಕ ಮತ ಪಡೆಯಲು ಯತ್ನಿಸಿದ್ದಾರೆ. ಇದು ಪರಿಶಿಷ್ಟ ಸಮುದಾಯಕ್ಕೆ ಮಾಡಿದ ದೊಡ್ಡ ಅವಮಾನವಾಗಿದೆ. ಇಲ್ಲಿ ಚುನಾವಣಾ ನೀತಿ ಉಲ್ಲಂಘನೆಯಾಗಿದ್ದು, ಈ ವಾರ್ಡ್‌ಗಳಲ್ಲಿ ಮರು ಚುನಾವಣೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದಿನೇಶ ಅನಂತಾಡಿ, ಸಂತೋಷ್ ಅನಂತಾಡಿ ಉಪಸ್ಥಿತರಿದ್ದರು.

- Advertisement -

Related news

error: Content is protected !!