Monday, April 29, 2024
spot_imgspot_img
spot_imgspot_img

‘ಬಿಗ್ ಬಾಸ್ ಸೀಸನ್ 10’ರ ವಿನ್ನರ್ ಆಗಿ ಗೆದ್ದು ಬೀಗಿದ ಕಾರ್ತಿಕ್ ಮಹೇಶ್​

- Advertisement -G L Acharya panikkar
- Advertisement -

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಪಟ್ಟವನ್ನು ಕಾರ್ತಿಕ್​ ಮಹೇಶ್​ ಮುಡಿಗೇರಿಸಿಕೊಂಡಿದ್ದಾರೆ. ಈ ವಿನ್ನರ್​ ಪಟ್ಟಕ್ಕಾಗಿ ಸಾಕಷ್ಟು ಸ್ಪರ್ಧಿಗಳು ಹೋರಾಟ ನಡೆಸಿದ್ದರು. ಅದರಲ್ಲೂ ಸಂಗೀತಾ ಶೃಂಗೇರಿ, ವಿನಯ್​ ಗೌಡ ಮತ್ತು ಡ್ರೋನ್​ ಪ್ರತಾಪ್ ಅವರು ಬಿಗ್​ಬಾಸ್​​ ಸೀಸನ್​​ ವಿನ್ನರ್​ ಪಟ್ಟಕ್ಕಾಗಿ ಸಾಕಷ್ಟು ಟಾಸ್ಕ್​​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಸದ್ಯ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಆಗಿ ಕಾರ್ತಿಕ್​ ಮಹೇಶ್​ ಹೊರಹೊಮ್ಮಿದ್ದಾರೆ. ರನ್ನರ್​ ಪಟ್ಟವನ್ನು ಡ್ರೋನ್​ ಪ್ರತಾಪ್​ ಅವರು ಪಡೆದುಕೊಂಡಿದ್ದಾರೆ. ಸದ್ಯ ಈ ಇಬ್ಬರಲ್ಲಿ ಬಿಗ್​ಬಾಸ್​ ವಿನ್ನರ್​ ಪಟ್ಟಕ್ಕಾಗಿ ದೊಡ್ಡ ಫೈಟ್​ ನಡೆದಿತ್ತು. ಕೊನೆಗೂ ಕನ್ನಡದ ಅತೀ ದೊಡ್ಡ ಶೋ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಯಾರು ಎಂದು ಘೋಷಣೆಯಾಗಿದೆ.

ಬಿಗ್​ಬಾಸ್​ ಮನೆಗೆ ಕಾರ್ತಿಕ್​ ಗ್ರ್ಯಾಂಡ್​​ ಆಗಿ ಎಂಟ್ರಿ ಕೊಟ್ಟಿದ್ದರು. ಬಿಗ್​ಬಾಸ್​ ಕೊಟ್ಟ ಎಲ್ಲಾ ಟಾಸ್ಕ್​ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಜೊತೆಗೆ ಬಿಗ್​​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಬಿಗ್​ಬಾಸ್​ ಶುರುವಾದಾಗಿನಿಂದ ಕೊನೆಯ ತನಕ ಚೆನ್ನಾಗಿ ಆಟವನ್ನು ಆಡಿದ್ದರು. ಬಿಗ್‌ಬಾಸ್ ಕನ್ನಡ 10ರಲ್ಲಿ ಅಭಿಮಾನಿಗಳ ಹೃದಯ ಗೆದ್ದು ವಿನ್ನರ್ ಆಗಿ ಗೆದ್ದು ಬೀಗಿದ್ದಾರೆ.

- Advertisement -

Related news

error: Content is protected !!