- Advertisement -
- Advertisement -




ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಯುವಕನಿಗೆ ಮೀನು ಚುಚ್ಚಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ದಾಂಡೇಭಾಗದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಅಕ್ಷಯ ಅನಿಲ ಮಾಜಾಳಿಕರ್ (24) ಎಂದು ಗುರುತಿಸಲಾಗಿದೆ.
ದೋಣಿಯಲ್ಲಿದ್ದ ಅಕ್ಷಯನಿಗೆ ನೀರಿನಿಂದ ಜಿಗಿದ ಚೂಪು ಮೂತಿಯ ಕಾಂಡೆ (ತೊಳೆ) ಮೀನು ಚುಚ್ಚಿದೆ. ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದ. ಈ ಮೀನು ಸುಮಾರು 8 ರಿಂದ 10 ಇಂಚಿತ್ತು ಎನ್ನಲಾಗಿದೆ. ಗಾಯಗೊಂಡ ಯುವಕನನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರು ಹೊಟ್ಟೆಯ ಭಾಗದ ಗಾಯಕ್ಕೆ ಹೊಲಿಗೆ ಹಾಕಿದ್ದರು.
ಮೀನಿನ ಮೂತಿ ಚುಚ್ಚಿದ್ದ ಪರಿಣಾಮ ಯುವಕನ ಕರುಳಿಗೂ ಗಾಯವಾಗಿತ್ತು ಎನ್ನಲಾಗಿದೆ. ಹೀಗಾಗಿ ನಿನ್ನೆ (ಅ.15) ರಾತ್ರಿ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
- Advertisement -








