Sunday, July 19, 2026
spot_imgspot_img
spot_imgspot_img

ಕಾರವಾರ: ಮಧ್ಯಪ್ರಾಚ್ಯದಿಂದ ಬರುತ್ತಿದ್ದ ಕಚ್ಚಾ ಡಾಂಬರ್ ಸಂಪೂರ್ಣ ಬಂದ್!

- Advertisement -
- Advertisement -

ಕಾರವಾರ: ಕಳೆದ ಒಂದು ವಾರದಿಂದ ಕಾರವಾರ ಬಂದರಿಗೆ ವಿದೇಶಿ ಕಚ್ಚಾ ಡಾಂಬರ್‌ ಪೂರೈಕೆ ಹಡಗುಗಳು ಬಾರದ ಕಾರಣದಿಂದ ಕಾರವಾರ ಬಂದರು ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್‌ ಆಗಿವೆ.

ಮಧ್ಯಪ್ರಾಚ್ಯ ಸಂಘರ್ಷದಿಂದ ಬಂದರು ವಾಣಿಜ್ಯ ಚಟುವಟಿಕೆಗಳ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು, ಇದೀಗ ಕಾರವಾರದ ಬಂದರು ವಾಣಿಜ್ಯ ಚಟುವಟಿಕೆ ಸಂಪೂರ್ಣ ಬಂದ್ ಆಗಿದೆ. ಕಚ್ಚಾ ಡಾಂಬರ್ ವಹಿವಾಟಿನಲ್ಲಿ ಕೊರತೆ ತಂದೊಡ್ಡಿದೆ.

ಕಾರವಾರ ಬಂದರಿಗೆ ಬರಬೇಕಿದ್ದ ಕಚ್ಚಾ ಡಾಂಬರ್ ಹಡಗುಗಳು ಮಧ್ಯಪ್ರಾಚ್ಯದಿಂದ ಬಾರದ ಹಿನ್ನಲೆಯಲ್ಲಿ ಡಾಂಬರ್ ಕಂಪನಿಗಳು ನಷ್ಟಕ್ಕೀಡಾದರೇ ಡಾಂಬರ್ ಬೆಲೆ ಸಹ ಏರಿಕೆ ಕಂಡಿದ್ದು, ಬಂದರಿನಲ್ಲಿ ವಾಣಿಜ್ಯ ಚಟುವಟಿಕೆ ಇಲ್ಲದೇ ಲಾರಿ, ಟ್ಯಾಂಕರ್ ಗಳು ಕಾಲಿ ನಿಂತಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!