Friday, May 23, 2025
spot_imgspot_img
spot_imgspot_img

ಕಾಸರಗೋಡು: ಬಸ್‌‌ಗಳ ನಡುವೆ ಅಪಘಾತ; 12 ಮಂದಿಗೆ ಗಾಯ…!

- Advertisement -
- Advertisement -

ಕಾಸರಗೋಡು: ಖಾಸಗಿ ಬಸ್ಸುಗಳ ನಡುವೆ ಉಂಟಾದ ಅಪಘಾತದಲ್ಲಿ 12 ಮಂದಿ ಗಾಯಗೊಂಡ ಘಟನೆ ಕಾಸರಗೋಡಿನ ಬ್ಯಾಂಕ್ ರಸ್ತೆಯಲ್ಲಿ ನಡೆದಿದೆ.

ಟೂರಿಸ್ಟ್ ಬಸ್ಸು ಮತ್ತು ಮಧೂರು – ಕಾಸರಗೋಡು ನಡುವೆ ಸಂಚಾರ ನಡೆಸುತ್ತಿರುವ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ನಾಗರಿಕರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.

ಖಾಸಗಿ ಬಸ್ಸಿನ ಚಾಲಕ ಕಮಲಾಕ್ಷ ಗಂಭೀರ ಗಾಯಗೊಂಡಿದ್ದಾರೆ. ಮನ್ನಿಪ್ಪಾಡಿಯ ಸ್ವಪ್ನಾ (49) , ಅಲಂಪಾಡಿಯ ಮುಸ್ತಾಫಾ ( 40) , ಪಟ್ಲ ದ ಅಬ್ಬಾಸ್ (66) , ಟೂ ರಿಸ್ಟ್ ಬಸ್ಸು ಚಾಲಕ ವಿದ್ಯಾನಗರ ದ ಸಫೀರ್ (40), ಅಲಂಪಾಡಿಯ ಅಬ್ದುಲ್ ರಹಮಾನ್ ( 50), ಮೀಪುಗುರಿಯ ಸುರೇಶ್ (49), ಉಳಿಯ ತ್ತಡ್ಕ ದ ಸರಸ್ವತಿ (57) ಮೊದಲಾದವರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!