Thursday, July 23, 2026
spot_imgspot_img
spot_imgspot_img

ಕಾಸರಗೋಡು: ಸ್ಕೂಟ‌ರ್ ಮತ್ತು ಬೈಕ್‌ ನಡುವೆ ಅಪಘಾತ- ಓರ್ವ ಸಾವು, ಮೂವರಿಗೆ ಗಾಯ

- Advertisement -
- Advertisement -

ಕಾಸರಗೋಡು: ಸ್ಕೂಟರ್ ಮತ್ತೆ ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಸೋಮವಾರ(ಮೇ 18) ರಾತ್ರಿ ಕಾಸರಗೋಡಿನಲ್ಲಿ ನಡೆದಿದೆ.

ಸ್ಕೂಟರ್ ಸವಾರ ಶಹಬಾಸ್ ಹಸನ್(17) ಮೃತ ಬಾಲಕ. ಈತ ಉದಯ ಗಿರಿಯಲ್ಲಿರುವ ಕೇಂದ್ರ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾನೆ. ಇನ್ನು ಈತನ ಜೊತೆಗಿದ್ದ ಸಹಸವಾರ ಹಾಗೂ ಬೈಕ್ ನಲ್ಲಿ ಇತರ ಇಬ್ಬರೂ ಗಾಯಗೊಂಡಿದ್ದು, ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ಕಾಸರಗೋಡು ನಗರ ಠಾಣಾ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!