Friday, April 26, 2024
spot_imgspot_img
spot_imgspot_img

ಅಲೆಗಳ ಅಬ್ಬರಕ್ಕೆ ಬೋಟ್ ಇಬ್ಬಾಗ – ಐವರು ಮೀನುಗಾರರ ರಕ್ಷಣೆ

- Advertisement -G L Acharya panikkar
- Advertisement -

ಕಾಸರಗೋಡು: ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ ಮಗುಚಿ ಐವರು ಬೆಸ್ತರು ಸಮುದ್ರದಲ್ಲಿ ಸಿಲುಕಿದ ಘಟನೆ ಬೇಕಲ ಸಮುದ್ರದಲ್ಲಿ ನಡೆದಿದೆ.

ಬುಧವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಎರಡು ಗಂಟೆಗಳ ಕಾಲ ಜೀವನ್ಮರಣದ ನಡುವೆ ಒದ್ದಾಡುತ್ತಿದ್ದ ಬೆಸ್ತರನ್ನು ಕರಾವಳಿ ರಕ್ಷಣಾ ಪಡೆ ಹಾಗೂ ಮೀನುಗಾರಿಕಾ ಇಲಾಖಾ ರಕ್ಷಣಾ ಪಡೆ ಸಿಬಂದಿಗಳು ರಕ್ಷಿಸಿದ್ದಾರೆ.ಕಾಸರಗೋಡು ತೀರದಿಂದ ಹತ್ತು ನಾಟಿಕಲ್ ಮೈಲ್ ದೂರದಲ್ಲಿ ಬೋಟ್ ಅಲೆಗಳ ಅಬ್ಬರಕ್ಕೆ ಮಗುಚಿ ಇಬ್ಬಾಗಗೊಂಡಿದ್ದು , ಬೋಟ್ ನ ಒಂದು ಭಾಗದಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ನಡುವೆ ಒದ್ದಾಡುತ್ತಿದ್ದರು.

ಈ ಬಗ್ಗೆ ಕರಾವಳಿ ರಕ್ಷಣಾ ಪಡೆಗೆ ಲಭಿಸಿದ ಮಾಹಿತಿಯಂತೆ ದೌಡಾಯಿಸಿದ ರಕ್ಷಣಾ ಪಡೆ ಸಿಬಂದಿಗಳು ಐವರನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ , ಎರಡು ದಿನಗಳ ಹಿಂದೆ ನೀಲೇಶ್ವರ ಆಯಿತ್ತಲದಿಂದ ತೆರಳಿದ್ದ ಮರಿಯ ಎಂಬ ಬೋಟ್ ಈ ದುರಂತಕ್ಕೀಡಾಗಿದ್ದು , ಬೋಟ್ ನಲ್ಲಿದ್ದವರು ತಿರುವನಂತಪುರ ನಿವಾಸಿಗಳೆಂದು ತಿಳಿದು ಬಂದಿದೆ. ಬೋಟ್ ನಲ್ಲಿದ್ದ ಶ್ಯಾಮ್ (18) , ಜಿಮ್ಮಿ ( 21), ಕುಮಾರ್ ( 43) , ಈಶ್ವರ್ ( 58) ಮತ್ತು ದಾಯಿ ರೋಸ್ (37) ರವರನ್ನು ತಡರಾತ್ರಿ ಕಾಸರಗೋಡು ತೀರಕ್ಕೆ ತಲಪಿಸಿ ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

- Advertisement -

Related news

error: Content is protected !!