Monday, June 22, 2026
spot_imgspot_img
spot_imgspot_img

ಕಾಸರಗೋಡು: ಮೀನುಗಾರಿಕಾ ಫೈಬರ್ ಬೋಟ್ ದುರಂತ: ಓರ್ವ ಸಾವು, ಇನ್ನೋರ್ವ ನಾಪತ್ತೆ: 35 ಮಂದಿಯ ರಕ್ಷಣೆ

- Advertisement -
- Advertisement -

ಕಾಸರಗೋಡು: ಸಮುದ್ರದಲ್ಲಿ ಮೀನುಗಾರಿಕಾ ಫೈಬರ್ ಬೋಟ್ ದುರಂತಕ್ಕೀಡಾದ ಘಟನೆ ಕೇರಳದ ಪಡನ್ನ ಆಯಿತ್ತಳ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮೃತ ಪಟ್ಟಿದ್ದು, 35 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಒಬ್ಬ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ವಳಿಯ ಪರಂಬ ಕಡೆಯಿಂದ ಬರುತ್ತಿದ್ದ ಇಂಡಿಯನ್ ಬೋಟ್ ದುರಂತಕ್ಕೆ ಸಿಲುಕಿದೆ. ಪ್ರಾಥಮಿಕ ಮಾಹಿತಿ ಯಂತೆ 37 ಮಂದಿ ಬೋಟ್ ನಲ್ಲಿದ್ದರು ಎನ್ನಲಾಗಿದೆ. ಕೇರಳ, ಒಡಿಸ್ಸಾ ನಿವಾಸಿಗಳಾದ ಬೆಸ್ತರು ಈ ಬೋಟ್ ನಲ್ಲಿದ್ದರು. ರಕ್ಷಿದವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ .ಘಟನೆಯಲ್ಲಿ ಪರಪ್ಪನಂಗಡಿಯ ಅಬೂಬಕ್ಕರ್ ( 58) ಮೃತಪಟ್ಟವರು. ನಾಪತ್ತೆಯಾದ ಓರ್ವನಿಗಾಗಿ ಶೋಧ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ . ಇಂಪಾ ಶೇಖರ್ , ಕಣ್ಣೂರು ಡಿ ಐ ಜಿ ರಾಜ್ ಪಾಲ್ ಮಿನಾ ಸಹಿತ ಹಲವು ರಾಜಕೀಯ ಮುಖಂಡರು, ಪೊಲೀಸ್‌ ಅಧಿಕಾರಿಗಳು, ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. ಕರಾವಳಿ ಪೊಲೀಸ್ ಹಾಗೂ ಮೀನುಗಾರರು ರಕ್ಷಣಾ ಕಾರ್ಯಕ್ಕೆ ನೆರವಾದರು. ಹೊಸದುರ್ಗ ಠಾಣಾ ಸಬ್ ಇನ್ಸ್ ಪೆಕ್ಟರ್ ಹಾಗೂ ಮುಳುಗು ತಜ್ಞ ಸೈಫುದ್ದೀನ್ ರಕ್ಷಣಾ ಕಾರ್ಯಕ್ಕೆ ನೇತೃತ್ವ ನೀಡಿದರು.

- Advertisement -

Related news

error: Content is protected !!