- Advertisement -
- Advertisement -




ಕಾಸರಗೋಡು: ಹಾವು ಕಚ್ಚಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ ವೆಳ್ಳರಿಕುಂಡು ಸಮೀಪದ ನರ್ಕಿಲಕ್ಕಾಡ್‌ನಲ್ಲಿ ಗುರುವಾರ ನಡೆದಿದೆ. ನರ್ಕಿಲಕ್ಕಾಡ್ ನ ಚಂದ್ರನ್-ಅಜಿತಾ ದಂಪತಿಯ ಪುತ್ರಿ ಋತು ಚಂದ್ರ ಮೃತಪಟ್ಟ ಬಾಲಕಿ.
ಸೋಮವಾರ ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ, ರಾಶಿ ಹಾಕಿದ್ದ ಮರದ ತುಂಡುಗಳ ಮಧ್ಯೆ ಬಿದ್ದ ಆಟಿಕೆ ಸಾಮಾನು ತೆಗೆದುಕೊಳ್ಳುವ ವೇಳೆ ಕೈಗೆ ಹಾವು ಕಚ್ಚಿತ್ತು ಎನ್ನಲಾಗಿದೆ. ಕೂಡಲೇ ಕಾಸರಗೋಡು ಆಸ್ಪತ್ರೆಗೆ ತಲುಪಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಪಯ್ಯನೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಗುರುವಾರ ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ವರದಿ ಮೂಲಕ ತಿಳಿದುಬಂದಿದೆ.
- Advertisement -








