Saturday, June 28, 2025
spot_imgspot_img
spot_imgspot_img

ಕಾಸರಗೋಡು: ಉದ್ಯೋಗದ ಭರವಸೆ ನೀಡಿ ಲಕ್ಷಾಂತರ ರೂ. ವಂಚನೆ..!

- Advertisement -
- Advertisement -

ಕಾಸರಗೋಡು: ಉದ್ಯೋಗ ನೀಡುವುದಾಗಿ ಭರವಸೆ ನೀಡಿ 15 ಲಕ್ಷ ರೂ. ಪಡೆದು ವಂಚನೆ ನಡೆಸಿರುವುದಾಗಿ ಆರೋಪಿಸಿ ಶಿಕ್ಷಕಿ ಹಾಗೂ ರಾಜಕೀಯ ಪಕ್ಷದ ಯುವ ಸಂಘಟನೆಯ ನಾಯಕಿಯೋರ್ವಳ ವಿರುದ್ಧ ಕುಂಬಳೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಕಿದೂರು ಪದಕ್ಕಲ್ ಹೌಸ್‌ನ ನಿಶ್ಮಿತಾ ಶೆಟ್ಟಿ ಅವರ ದೂರಿನಂತೆ ಶೇಣಿ ಬಲ್ತಕಲ್ಲಿನ ಸಚಿತಾ ರೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಪಿಸಿಆರ್ ಐ ನಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆ ನೀಡಿ 2023 ರ ಮೇ 31 ರಿಂದ 2023 ರ ಆಗಸ್ಟ್ 25 ರ ನಡುವೆ ಹಲವು ಕಂತುಗಳಾಗಿ 15,05,796 ರೂ . ಪಡೆದು ವಂಚನೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಲವು ಬಾರಿ ವಿಚಾರಿಸಿದರೂ ಉದ್ಯೋಗ ಲಭಿಸಲಿಲ್ಲ. ನೀಡಿದ ಹಣ ಕೇಳಿದರೂ ನೀಡಲು ಮುಂದಾಗದಿರುವುದರಿಂದ ನಿಶ್ಚಿತಾ ಶೆಟ್ಟಿ ದೂರು ನೀಡಿದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!