Monday, June 22, 2026
spot_imgspot_img
spot_imgspot_img

ಕಾಸರಗೋಡು: ಎಂಡಿಎಂಎ ಕೊಂಡೊಯ್ಯುತ್ತಿದ್ದ ಮಲಯಾಳಂ ಸಿನಿಮಾ ಸಹ ನಿರ್ದೇಶಕನ ಬಂಧನ

- Advertisement -
- Advertisement -

ಕಾಸರಗೋಡು: ಕೇರಳದ ತಂಬಾನೂರಿಗೆ ಎಂ.ಡಿ.ಎಂ.ಎ ಸಹಿತ ರೈಲಿನಲ್ಲಿ ಪ್ರಯಾಣ ಬೆಳೆಸಿದ ಮಲಯಾಳಂ ಸಿನಿಮ ಸಹ ನಿರ್ದೇಶಕನನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ.ತಿರುವನಂತಪುರದ ಲ್ಲಿ ಈ ಕಾರ್ಯಾಚರಣೆ ನಡೆಯಿತು. ಇಲ್ಲಿನ ಕರಮನ ವಿಳಿಂಜಂ ಟೌನ್ ಶಿಪ್ ನಲ್ಲಿ ವಾಸಿಸುವ , ಅಸಿಸ್ಟೆಂಟ್ ಡೈರೆಕ್ಟರ್ ಜಸೀಮ್(35) ಬಂಧಿತ ವ್ಯಕ್ತಿಯಾಗಿದ್ದಾನೆ.

ನಿನ್ನೆ ಬೆಳಿಗ್ಗೆ ಕಾಸರಗೋಡಿನಿಂದ ರೈಲಿನಲ್ಲಿ ಬಂದಾತನನ್ನು ಶ್ಯಾಡೋ ಪೋಲೀಸ್ ಮತ್ತು ತಂಬಾನೂರು ಪೋಲೀಸರು ಬೆನ್ನಟ್ಟಿ ಬಂಧಿಸಿದರು.ಈತನಿಂದ 2.08ಗ್ರಾಂ ಎಂಡಿಎಂಎ ವಶ ಪಡಿಸಲಾಗಿದೆ.ಈತ ಕಾಸರಗೋಡಿನ ನಂಟು ಹೊಂದಿದ್ದು, ಸಿನಿಮ ಸೆಟ್ ಗಳಿಗೆ ಎಂಡಿಎಂಎ ತರುತ್ತಿದ್ದನೆಂಬ ರಹಸ್ಯ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆದಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

- Advertisement -

Related news

error: Content is protected !!