Sunday, June 29, 2025
spot_imgspot_img
spot_imgspot_img

ಕಾಸರಗೋಡು: ರೈಲಿನಿಂದ ಬಿದ್ದು ವ್ಯಕ್ತಿ ಸಾವು..!

- Advertisement -
- Advertisement -

ಕಾಸರಗೋಡು: ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ರೈಲಿನಿಂದ ಬಿದ್ದು ವಿದೇಶವಾಸಿಯೊಬ್ಬರು ಸಾವನ್ನಪ್ಪಿದ ಘಟನೆ ಕಾಸರಗೋಡು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಚೆಮ್ಮನಾಡಿನ ಕಡವತ್ ಮೂಲದ ಬಶೀ‌ರ್ (62) ಎಂದು ಗುರುತಿಸಲಾಗಿದೆ.

ಇವರು ಮಂಗಳೂರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಕಾಸರಗೋಡು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಅಪಘಾತ ಸಂಭವಿಸಿದೆ. ವಾರದ ಹಿಂದೆ ಬಶೀರ್ ತಂದೆ ತೀರಿಕೊಂಡಿದ್ದರು. ಈ ಮಾಹಿತಿ ತಿಳಿದ ಅವರು ಕಡವಂನಲ್ಲಿರುವ ತಮ್ಮ ಕುಟುಂಬದ ಮನೆಗೆ ತಲುಪಿ ಮಂಗಳೂರಿಗೆ ಮರಳಿದರು. ಎರಡು ದಿನಗಳ ನಂತರಬಶೀರ್ ತನ್ನ ತಂದೆಯ ಮರಣೋತ್ತರ ಸಮಾರಂಭದಲ್ಲಿ ಪಾಲ್ಗೊಳ್ಳಲು ರೈಲಿನಲ್ಲಿ ಚೆಮ್ಮನಾಗ್ಗೆ ಬರುತ್ತಿದ್ದರು. ಕಾಸರಗೋಡು ರೈಲು ಇಳಿಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!