Wednesday, June 17, 2026
spot_imgspot_img
spot_imgspot_img

ಕಾಸರಗೋಡು: ರೈಲು ಡಿಕ್ಕಿ ಹೊಡೆದು 10 ನೇ ತರಗತಿ ವಿದ್ಯಾರ್ಥಿನಿ ಮೃತ್ಯು

- Advertisement -
- Advertisement -

ಕಾಸರಗೋಡು: 10ನೇ ತರಗತಿ ವಿದ್ಯಾರ್ಥಿನಿ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ. ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಪವಿತ್ರಾ (15) ಮೃತ ದುರ್ದೈವಿ.

ತಮಿಳುನಾಡು ಮೂಲದ ಮುರುಕ್ ಮತ್ತು ದಿವಂಗತ ಕಾರ್ತಿಕಾ ದಂಪತಿಯ ಪುತ್ರಿ ಪವಿತ್ರಾ ಮೃತ ವಿದ್ಯಾರ್ಥಿನಿ. ಇವರ ಕುಟುಂಬ ಕಟಿಕಲ್ ನಲ್ಲಿ ಬಾಡಿಗೆ ಕ್ವಾರ್ಟರ್ಸ್ ನಲ್ಲಿ ವಾಸವಿದ್ದರು ಎನ್ನಲಾಗಿದೆ.

ಕಾಞಂಗಾಡ್ ರೈಲು ನಿಲ್ದಾಣದಲ್ಲಿ ಬುಧವಾರ ಸಂಜೆ 4.40ಕ್ಕೆ ಶಾಲೆಯಿಂದ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ಮಂಗಳೂರು ಕಡೆಗೆ ಹೋಗುತ್ತಿದ್ದ ಕೊಯಮತ್ತೂರು ಎಕ್ಸ್‌ಪ್ರೆಸ್ ಕಾಞಂಗಾಡ್ ರೈಲು ನಿಲ್ದಾಣದ ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲಿಸಲು ಮುಂದಾದಾಗ ನಿಲ್ಲಿಸಿದ ಗೂಡ್ಸ್ ರೈಲುಗಳ ನಡುವೆ ರೈಲ್ವೆ ಹಳಿ ದಾಟಲು ಮುಂದಾದಾಗ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!