Thursday, June 18, 2026
spot_imgspot_img
spot_imgspot_img

ಕಾಸರಗೋಡು: 50 ಲಕ್ಷ ರೂ. ದರೋಡೆ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್‌..!

- Advertisement -
- Advertisement -

ಕಾಸರಗೋಡು: ಎಟಿಎಂನಲ್ಲಿ ಹಣ ತುಂಬಿಸಲು ಬಂದ ವಾಹನದಿಂದ 50 ಲಕ್ಷ ರೂ ದರೋಡೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ತಮಿಳುನಾಡು ತಿರುಚ್ಚಿಯಿಂದ ವಿಶೇಷ ತನಿಖಾ ತಂಡ ಬಂಧಿಸಿದೆ.

ಬಂಧಿತ ಆರೋಪಿಯನ್ನು ತಿರುಚ್ಚಿ ರಾಮ್‌ಜಿ ನಗರ ಹರಿಭಾಸ್ಕರ ಕಾಲನಿಯ ಕಾರ್ವರ್ಣನ್(28) ಎಂದು ಗುರುತಿಸಲಾಗಿದೆ.

2024 ಮಾರ್ಚ್ 24 ರಂದು ಉಪ್ಪಳದಲ್ಲಿ ದರೋಡೆ ನಡೆದಿತ್ತು. ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ಆಗಮಿಸಿದ ವಾಹನದಲ್ಲಿದ್ದ 50 ಲಕ್ಷ ರೂ.ಗಳನ್ನು ದರೋಡೆಗೈಯ್ಯಲಾಗಿತ್ತು. ಮಾಹಿತಿ ತಿಳಿದು ಆಗಮಿಸಿದ ಪೊಲೀಸರು ಸಿ.ಸಿ.ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಸುಳಿವು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಓರ್ವ ಆರೋಪಿ ಮುತ್ತು ಕುಮಾರ್ ನನ್ನು ತಿಂಗಳ ಬಳಿಕ ಬಂಧಿಸಲಾಗಿತ್ತು.

ಇದೀಗ ದರೋಡೆಯ ಸೂತ್ರಧಾರ ಕಾರ್ವರ್ಣನ್ ಹಾಗೂ ಇನ್ನೋರ್ವ ಪರಾರಿಯಾಗಿದ್ದು ಈತನ ಬಂಧನಕ್ಕಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈತ ತಿರುಚ್ಚಿಯಲ್ಲಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!