Sunday, June 29, 2025
spot_imgspot_img
spot_imgspot_img

ಕಾಸರಗೋಡು: ಯುವತಿಗೆ ಲೈಂಗಿಕ ಕಿರುಕುಳ; ಪ್ರಾಧ್ಯಾಪಕ ಅರೆಸ್ಟ್..!

- Advertisement -
- Advertisement -

ಕಾಸರಗೋಡು: ಕಣ್ಣೂರು ಪರಶ್ಮಿನಕಡವ್ ವಾಟರ್ ಥೀಂ ಪಾರ್ಕ್ ನ ವೇವ್ ಪೂಲ್‌ನಲ್ಲಿ ಸ್ನಾನ ಮಾಡುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೆರಿಯಾ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಂಧಿಸಲಾಗಿದೆ.

ಬಂಧಿತ ಪ್ರಾಧ್ಯಾಪಕ ಡಾ. ಇಫಿಕಾರ್ ಅಹಮ್ಮದ್ (30) ಎಂದು ಗುರುತಿಸಲಾಗಿದೆ.

ಪಾರ್ಕ್‌ನ ವೇವ್‌ಪೂಲ್‌ನಲ್ಲಿ ಸೋಮವಾರ ಸಂಜೆ ಮಲಪುರ ಜಿಲ್ಲೆಯ 22 ವರ್ಷದ ಯುವತಿಯೊಂದಿಗೆ ಇಫಿಕಾರ್ ಅಹಮ್ಮದ್ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ವೇಳೆ ಯುವತಿ ಬೊಬ್ಬೆ ಹೊಡೆದಿದ್ದು, ಪಾರ್ಕ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಫಿಕಾರ್ ಅಹಮ್ಮದ್ ವಿರುದ್ಧ ಜಾಮೀನು ರಹಿತ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಇಫಿಕಾರ್ ಅಹಮ್ಮದ್ ನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಇನ್ನು ಈ ಹಿಂದೆಯೂ ಈ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ದೌರ್ಜನ್ಯ ದೂರುಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!