Wednesday, June 17, 2026
spot_imgspot_img
spot_imgspot_img

ಕಾಸರಗೋಡು: ವೃದ್ದ ದಂಪತಿಯ ಮೃತದೇಹ ಕೆರೆಯಲ್ಲಿ ಪತ್ತೆ..!

- Advertisement -
- Advertisement -

ಕಾಸರಗೋಡು : ವೃದ್ದ ದಂಪತಿಯ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಕಾಞಂಗಾಡ್ ನ ರಾಜಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪನತ್ತಡಿ ಎಂಬಲ್ಲಿ ನಡೆದಿದೆ.

ಮೃತ ದಂಪತಿಗಳನ್ನು ಪನತ್ತಡಿ ನಿಲಚ್ಚಾಲ್ ನಿವಾಸಿಗಳಾದ ಎನ್. ಕೃಷ್ಣ ನಾಯ್ಕ ( 84) ಪತ್ನಿ ಐತ್ತಮ್ಮ ಬಾಯಿ ( 80) ಎಂದು ಗುರುತಿಸಲಾಗಿದೆ. ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರನ್ನು ಹುಡುಕಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆ ಸಮೀಪದ ಕೆರೆಯಲ್ಲಿ ಶನಿವಾರ ಸಂಜೆ ಮೃತದೇಹ ಪತ್ತೆಯಾಗಿದ್ದು, ಆಕಸ್ಮಿಕವಾಗಿ ಕೆರೆಗೆ ಬಿದ್ದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ರಾಜಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!